ಜ.22 ಕ್ಕೆ ಟೈಲರ್ಸ್ ಕೊಗ್ಗ ಜೋಗಿಗಂಗಮ್ಮ ಸ್ಮರಣಾರ್ಥದತ್ತಿ ನಿಧಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 20. ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕ ಮತ್ತು ಗೋವಿಂದಾಸ ಕಾಲೇಜಿನ ಮಾನವಿಕ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಜನವರಿ 22 ರಂದು ಬೆಳಿಗ್ಗೆ 10 ಕ್ಕೆ ಸುರತ್ಕಲ್‍ನ ಗೋವಿಂದಾಸ ಕಾಲೇಜಿನಲ್ಲಿ ಟೈಲರ್ಸ್ ಕೊಗ್ಗ ಜೋಗಿಗಂಗಮ್ಮ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಗೋವಿಂದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ ಕುಳಾಯಿ ಉದ್ಘಾಟಿಸಲಿದ್ದಾರೆ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ ಕಲ್ಕೂರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಜಾನಪದ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ.ಭಾಸ್ಕರ್‍ ರೈ ಕುಕ್ಕುವಳಿ ಉಪನ್ಯಾಸ ನೀಡಲಿದ್ದಾರೆ. ಮೋಟಾರು ವಾಹನದ ನಿವೃತ್ತ ಇನ್ಸ್‍ಪೆಕ್ಟರ್ ಹರೀಶ್‍ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ.ಪಿ ಹಾಗೂ ಕಾಲೇಜಿನ ಮಾನವಿಕ ವಿಭಾಗದ ಡೀನ್ ಬಿ.ವೈ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕನ್ನಡ  ಸಾಹಿತ್ಯ ಪರಿಷತ್ತಿನ ಘಟಕಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ

error: Content is protected !!
Scroll to Top