ಮಂಗಳೂರಿನಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ ➤ ಇಂದು ಇಬ್ಬರಲ್ಲಿ ಕೊರೋನಾ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.01. ದಕ್ಷಿಣ ಕನ್ನಡದಲ್ಲಿ ಕೊರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಶುಕ್ರವಾರದಂದು ಎರಡು ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ.

ಮಂಗಳೂರಿನ ಬೋಳಾರ ನಿವಾಸಿ 69 ವರ್ಷದ ವೃದ್ಧ ಹಾಗೂ ಬಂಟ್ವಾಳದ 62 ವರ್ಷದ ವೃದ್ಧ ಸೇರಿದಂತೆ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top