ಮಂತ್ರಾಲಯಕ್ಕೆ ತೆರಳಲು ಪ್ಲ್ಯಾನ್ ಹಾಕಿದವರಿಗೆ ಶುಭ ಶುದ್ದಿ ➤ ಇಂದಿನಿಂದ ಪ್ರತೀದಿನ ಮಂಗಳೂರಿನಿಂದ ಕೆಎಸ್ಸಾರ್ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, .13. ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ಮಂತ್ರಾಲಯಕ್ಕೆ ಕೆಎಸ್ಸಾರ್ಟಿಸಿ ನಾನ್ ಎಸಿ ಸ್ಲೀಪರ್ ಸಾರಿಗೆಯು ಇಂದಿನಿಂದ ಪ್ರಾರಂಭಗೊಳ್ಳಲಿದೆ.

ಮಂಗಳೂರಿನಿಂದ ಉಡುಪಿ-ಕುಂದಾಪುರ-ಹಾಲಾಡಿ-ಸಿದ್ದಾಪುರ-ಮಾಸ್ತಿಕಟ್ಟೆ- ತೀರ್ಥಹಳ್ಳಿ- ಶಿವಮೊಗ್ಗ- ಚೆನ್ನಗಿರಿ- ಹೊಳಲ್ಕೆರೆ- ಚಿತ್ರದುರ್ಗ- ಚಳ್ಳೆಕೆರೆ- ರಾಂಪುರ-ಬಳ್ಳಾರಿ- ಆಲೂರು- ಆದೋನಿ- ಮಾಧವರಂ ಕ್ರಾಸ್ ಮಾರ್ಗವಾಗಿ ಮಂತ್ರಾಲಯಕ್ಕೆ ಹಾಗೂ ಮಂತ್ರಾಲಯದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ನಾನ್ ಎಸಿ ಸ್ಲೀಪರ್ ಸಾರಿಗೆಯು ಇಂದಿನಿಂದ ಪ್ರಾರಂಭಗೊಳ್ಳಲಿದ್ದು, ನೂತನ ಸಾರಿಗೆಯ ಉದ್ಘಾಟನೆಯನ್ನು ಜನವರಿ 14 ರಂದು ಮಧ್ಯಾಹ್ನ 3 ಗಂಟೆಗೆ ದಕ್ಷಿಣ ವಿಧಾನ ಸಭಾ ಶಾಸಕ ವೇದವ್ಯಾಸ ಕಾಮತ್‍ರವರು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಆವರಣದಲ್ಲಿ ನೆರವೇರಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಆರೆಸ್ಸೆಸ್ ಕಾರ್ಯಕರ್ತನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ...!

error: Content is protected !!
Scroll to Top