ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ನೌಕರರ ವಾರ್ಷಿಕ “ಸ್ನೇಹ ಮಿಲನ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ನಿವೃತ್ತ ನೌಕರರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿದ್ದು, ತಮ್ಮ ಅನನ್ಯ ಸೇವೆಯಿಂದ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಎಂದು ಒಕ್ಕೂಟದ ಅಧ್ಯಕ್ಷರ ವಿರಾಜ ಹೆಗ್ಡೆ ಹೇಳಿದರು.


ಅವರು ಜನವರಿ 9 ರಂದು ಕುಲಶೇಖರದಲ್ಲಿರುವ ಹಾಲು ಒಕ್ಕೂಟದ ಸಭಾ ಗೃಹದಲ್ಲಿ ದ.ಕ ಹಾಲು ಒಕ್ಕೂಟದ ನಿವೃತ್ತ ನೌಕರರ ತೃತೀಯ ವರ್ಷದ “ಸ್ನೇಹ ಮಿಲನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಿವೃತ್ತ ನೌಕರರ ಸೇವಾ ತತ್ಪರತೆ,“ಅಭಿಮಾನ” ಪರಿಶ್ರಮದಿಂದ ಒಕ್ಕೂಟವು ರಾಜ್ಯ, ರಾಷ್ಟ್ರ ಮಟ್ಟದ ಕೀರ್ತಿಗೆ ಪಾತ್ರವಾಗಿದೆ ಅವರ ಸೇವೆಯನ್ನು ಸ್ಮರಿಸಬೇಕು ಎಂದರು. ಮುಖ್ಯ ಅತಿಥಿ, ಒಕ್ಕೂಟದ ಉಪಾಧ್ಯಕ್ಷ  ಪ್ರಕಾಶ್ಚಂದ್ರ ಶೆಟ್ಟಿ ಮೇಕೋಡು ಮಾತನಾಡಿ, ರಾಜ್ಯದಲ್ಲಿ ವಿಶೇಷವಾಗಿ ಒಕ್ಕೂಟದ ನಿವೃತ್ತ ನೌಕರರು ನಿರಂತರವಾಗಿ ಸ್ನೇಹಮಿಲನ ಕಾರ್ಯಕ್ರಮದೊಂದಿಗೆ ಒಕ್ಕೂಟದೊಂದಿಗೆ ಸಂಪರ್ಕವಿರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು, ಒಕ್ಕೂಟದ ಅಧಿಕಾರಿಗಳ ಸೇವೆ, ಸ್ನೇಹ ಸಂಬಂಧಕ್ಕೆ ಮೆಚ್ಚುಗೆ ಸೂಚಿಸಿದರು.

Also Read  ಜೀವನದಲ್ಲಿ ನೆಮ್ಮದಿ ಬೇಕು ಅಂದ್ರೆ ಇದನ್ನು ಪಾಲಿಸಿ ಯಾವುದೇ ಕಷ್ಟಗಳು ಬರುವುದಿಲ್ಲ ನಿಮ್ಮ ಸಮಸ್ಯೆಗಳಿಗೆ ಗುರೂಜಿ ಅವರನ್ನು ಸಂಪರ್ಕಿಸಿ

error: Content is protected !!