ಸುಬ್ರಹ್ಮಣ್ಯ: ಹೊರರೋಗಿ ಚಿಕಿತ್ಸಾ ವಿಭಾಗಕ್ಕೆ ಶಾಸಕರಿಂದ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ‌. 07. ಕುಕ್ಕೇ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ 1.11ಕೋಟಿ ರೂ. ವೆಚ್ಚದಲ್ಲಿ ಹೊರರೋಗಿ ವಿಬಾಗದ ಚಿಕಿತ್ಸಾ ಘಟಕದ ಶಂಕುಸ್ಥಾಪನೆಯನ್ನ ಶಾಸಕ ಎಸ್.ಅಂಗಾರ ಅವರು ಇಂದು ನೆರವೇರಿಸಿದರು.

ಇದರಲ್ಲಿ 4 ಹಾಸಿಗೆಗಳ ಹೊರ ರೋಗಿ ವಿಭಾಗ, ಪ್ರಯೋಗಾಲಯ, ನಿರೀಕ್ಷಣಾ ಕೊಠಡಿ ವೈದ್ಯಾಧಿಕಾರಿಗಳ ಕೊಠಡಿ, ಎಂಟ್ರೆನ್ಸ್ ಲ್ಯಾಬ್, ರಿಸೆಪ್ಷನ್ ಕೌಂಟರ್, ಡ್ರೆಸ್ಸಿಂಗ್ ರೂಂ, ಗಂಡಸರ ಮತ್ತು ಹೆಂಗಸರ ಶೌಚಾಲಯಯದ ವ್ಯವಸ್ಥೆ ಇರಲಿದೆ. ಈ ಸಂದರ್ಭದಲ್ಲಿ ಅಭಿವೃದ್ದಿ ಸಮಿತಿ ಸದಸ್ಯ ಪಿ.ಜಿ.ಎಸ್.ಎನ್ ಪ್ರಸಾದ್, ಮನೋಹರ್ ರೈ, ವನಜಾ ಭಟ್, ಜಿ.ಪಂ.ಸದಸ್ಯೆಆಶಾ ತಿಮ್ಮಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ/ ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು.

Also Read  ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ - ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ

error: Content is protected !!
Scroll to Top