ಮರ್ಕಂಜ: ಮದ್ಯದ ಅಮಲಿನಲ್ಲಿ ಮರವೇರಿ ಕುಳಿತು ಕುತೂಹಲ ಮೂಡಿಸಿದ ಭೂಪ ➤ ಅಗ್ನಿಶಾಮಕ‌ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 05. ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವರು ಮರವೇರಿತ ಕುಳಿತ ಘಟನೆ ಮರ್ಕಂಜದಲ್ಲಿ ವರದಿಯಾಗಿದೆ‌.

ಕೇರಳ ಮೂಲದ ಅಪರಿಚಿತ ವ್ಯಕ್ತಿಯೋರ್ವ ಮರ್ಕಂಜದ ಅಂಬೆಕಲ್ಲು ಎಂಬಲ್ಲಿರುವ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಮರವೇರಿ ಕುಳಿತು ಬೊಬ್ಬೆ ಹೊಡೆಯತೊಡಗಿದ್ದು, ಸ್ಥಳೀಯರು ಬಂದು ವಿಚಾರಿಸಿದರೂ ಆತ ಕೆಳಗಿಳಿಯದೇ ಕೋತಿಯ ಹಾಗೆ ವರ್ತಿಸುತ್ತಿದ್ದನು ಎನ್ನಲಾಗಿದೆ. ಮಧ್ಯಾಹ್ನ ಮರವೇರಿ ಕುಳಿತವನನ್ನು ರಾತ್ರಿ ಒಂಬತ್ತು ಗಂಟೆಯ ವೇಳೆಗೆ ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದಿಂದ ಇಳಿದು ಬಂದಿದ್ದಾನೆ.

Scroll to Top