ಕಡಬ: ಜ್ಯೂಸ್ ಕುಡಿಯಲು ಬಂದಿದ್ದ ಬಾಲಕಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ಆರೋಪ ➤ ಅಂಗಡಿ ಬಳಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಕಡಬ, ಜ.02. ಜ್ಯೂಸ್ ಕುಡಿಯಲೆಂದು ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ವಾಟ್ಸ್ಅಪ್ ಸ್ಟೇಟಸ್ ಹಾಕಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜ್ಯೂಸ್ ಸೆಂಟರ್ ಬಳಿ ಜಮಾಯಿಸಿದ ಘಟನೆ ಶನಿವಾರ ಸಂಜೆ ಕಡಬದಲ್ಲಿ ನಡೆದಿದೆ.

ಅನ್ಯಕೋಮಿನ ವ್ಯಕ್ತಿಗೆ ಸೇರಿದ ಜ್ಯೂಸ್ ಸೆಂಟರ್ ಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ಅಂಗಡಿ ಮಾಲಕ ತನ್ನ ವಾಟ್ಸಪ್ ನಲ್ಲಿ ಹಾಕಿ ಆ ಬಳಿಕ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಗಡಿ ಬಳಿ ಜಮಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎರಡೂ ಧರ್ಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

Also Read  ದ.ಕ :ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ➤ ಇಂದಿನಿಂದ ನಾಮ ಪತ್ರ ಸಲ್ಲಿಕೆ, ಇವಿಎಂ ಬಳಕೆಯಿಲ್ಲ

error: Content is protected !!
Scroll to Top