ಮಂಗಳೂರು :ರಾಷ್ಟ್ರೀಯ ವರ್ಚುವಲ್‌ ವಿಚಾರ ಸಂಕಿರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಶ್ರೀನಿವಾಸ್‌ ವಿಶ್ವವಿದ್ಯಾಲಯದ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮತ್ತು ಟೂರಿಸಂ ನ ವಿಭಾಗದಿಂದ ಭಾರತದಲ್ಲಿ ಗ್ರಾಮಿಣ ಮತ್ತು ನಗರ ಪ್ರವಾಸೋದ್ಯಮ, ಪ್ರಸ್ತುತ ಪ್ರವೃತ್ತಿಗಳು ಮತ್ತು ಸಮಸ್ಯೆಗಳು ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವರ್ಚುವಲ್ ವಿಚಾರ ಸಂಕಿರಣವನ್ನು ಪಾಂಡೇಶ್ವರದಲ್ಲರುವ ಸಿಟಿಕ್ಯಾಂಪಸ್‌ನಲ್ಲಿ ಡಿಸೆಂಬರ್‌ 24ರಂದು ಆಯೋಜಿಸಿತು.

 

ಮ್ಯಾರಿಯೇಟ್‌ ಸಿಂಗಾಪುರದ ಯೋಜನೆ ಮತ್ತು ಸೇವಾ ವ್ಯವಸ್ಥಾಪಕ ಸೂರಜ್‌ ಕನ್ನಾ ಕಾರ್ಯಕ್ರಮದ ಉದ್ಘಾಟಿಸಿ, ಕೋವಿಡ್‌ 19ರ ಪ್ರಭಾವದಿಂದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಾದ ಭಾರಿ ಬದಲಾವಣೆಗಳ ಕುರಿತು ಮಾತನಾಡಿದರು.ತಮಿಳುನಾಡಿನ ಮಧುರೈಕಾಮ್ರಾಜ್‌ ವಿಶ್ವವಿದ್ಯಾಯಲಯದ ಪ್ರಾಂಶುಪಾಲಡಾ. ಬಿ. ಜಾರ್ಜ್‌ ಹಾಗೂ ಮಣಿಪಾಲ ಮಾಹೆಯ ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದ ಪ್ರೊಫೆಸರ್‌ ಡಾ. ಸೆಂತಿಲ್‌ ಕುಮಾರನ್‌ ಪಿ. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

Also Read  ಕುಂದಾಪುರ: ಬೇಟೆಯಾಡಲು ಕಾಡಿಗೆ ಅಕ್ರಮ ಪ್ರವೇಶ ಮಾಡಿದ ವಾಹನ ಪೊಲೀಸರ ವಶಕ್ಕೆ

 

 

ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ ಎ ರಾಘವೇಂದ್ರರಾವ್‌ ಹಾಗೂ ಸಹಕುಲಾಧಿಪರಿ ಡಾ. ಎ ಶ್ರೀನಿವಾಸ್‌ ರಾವ್‌ ಸಮ್ಮೇಳನದಲ್ಲಿ ಮಂಡಿತವಾಗಲಿರುವ ಸಂಶೋಧನಾ ಬರಹಗಳ ಪುಸ್ತಿಕೆಯನ್ನು ಬಿಡುಗಡೆಗೊಳಿಸಿದರು. ವಿಚಾರ ಸಂಕಿರಣದ ಸಂಶೋಧನಾ ಬರಹಗಳ ಪುಸ್ತಿಕೆಯನ್ನು ಕುಲಪತಿಡಾ. ಪಿ. ಎಸ್‌. ಐತಾಳ್‌ ಬಿಡುಗಡೆಗೊಳಿಸಿದರು.
ಕಾಲೇಜಿನಡೀನ್‌ ಪ್ರೊ. ಎಸ್.‌ಸ್ವಾಮಿನಾಥನ್‌ ಸ್ವಾಗತಿಸಿ, ಕಾರ್ಯಕಾರಿ ಕಾರ್ಯದರ್ಶಿ ಅರ್ಜುನ್‌ ಕೆ ವಂದಿಸಿದರು. ವಿಚಾರ ಸಂಕಿರಣದ ಸಂಯೋಜಕ ಸುಬ್ರತ್‌ ಸರಫ್‌ ಉಪಸ್ಥಿತರಿದ್ದರು.

error: Content is protected !!
Scroll to Top