ಬಂಟ್ವಾಳ :ತಡರಾತ್ರಿ ಟೆರೇಸ್ ನಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಕಳೆದ ದಿನ ತಡರಾತ್ರಿ ಯುವಕನೊಬ್ಬ ಟೆರೇಸ್ ನಿಂದ ಬಿದ್ದು ಮೃತಪಟ್ಟ ಘಟನೆ  ಬಂಟ್ವಾಳ ತಾಲೂಕಿನ ಕೇಪು ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ ನಿವಾಸಿ ಪ್ರಸಾದ್ ಆಚಾರ್ಯ(28) ಮೃತಪಟ್ಟವರು. ಅವರು ಕೇಪು ಕುಕ್ಕೆಬೆಟ್ಟುವಿನಲ್ಲಿ ಸಂಬಂಧಿಕರ ಮನೆಯಲ್ಲಿ ಚಿನ್ನದ ಕೆಲಸವನ್ನು ಮಾಡುತ್ತಿದ್ದರು.ಬುಧವಾರ ತಡರಾತ್ರಿ ಟೆರೇಸ್ ನಿಂದ ಬಿದ್ದಿದ್ದಾರೆ. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ವಿಟ್ಲದ ಕಡೆಗೆ ಬರುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದರು.ಘಟನೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Scroll to Top