ಮಂಗಳೂರು :ಶಕ್ತಿ ವಸತಿ ಶಾಲೆಯಲ್ಲಿ ಕ್ರಿಸ್‍ಮಸ್‍ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಪ್ರಸ್ತುತ ದಿನದ ಒತ್ತಡದಿಂದ ಶಾಲೆಯ ವಾತಾವರಣ ಮನೋರಂಜನೆಯಿಂದ ವಂಚಿತರಾದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯು ಆನ್‍ಲೈನ್ ತರಗತಿಯ ಮೂಲಕ ಶಿಕ್ಷಣವನ್ನು ನೀಡುವುದರ ಜೊತೆಗೆ ಹಲವಾರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದ್ದು, ರಾಷ್ಟ್ರೀಯ ಹಬ್ಬಗಳ ಸಂದರ್ಭ ಬಗೆ ಬಗೆಯ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರತೀ ವರ್ಷದಂತೆ ‘ಶಕ್ತಿ ಸಿರಿ, ಶಕ್ತಿ ಶ್ರೀ’ ಎಂಬ ಸ್ಪರ್ಧೆಯನ್ನು ಏರ್ಪಡಿಸಿ ಸುಂದರವಾದ ಉಡುಪು, ಅಲಂಕಾರದೊಂದಿಗೆ ರ್ಯಾಂಪ್ ವಾಕ್ ಮಾಡಿ ಉತ್ತಮ ಪ್ರದರ್ಶನ ನೀಡಿದ ಇಬ್ಬರು ವಿದ್ಯಾರ್ಥಿಗಳನ್ನು ‘ಶಕ್ತಿ ಸಿರಿ ಮತ್ತು ಶಕ್ತಿ ಶ್ರೀ’ ಎಂದು ಆಯ್ಕೆ ಮಾಡಲಾಗಿದೆ.ಜೂನಿಯರ್ ವಿಭಾಗದಲ್ಲಿ ಸಜಿನಿ ಆಚಾರ್ಯ ಹಾಗೂ ಮಾ| ಹೃದಿಕ್ ವಿನಯ್ ಮತ್ತು ಸೀನಿಯರ್ ವಿಭಾಗದಲ್ಲಿ ಮರಿಯಮ್‍ಅನ್ಸುಂ ಮತ್ತು ಮಾ| ತನ್ಮಯ್ ಪೂಜಾರಿ ಆಯ್ಕೆಯಾಗಿದ್ದಾರೆ.

Also Read  ಪಿಲಿಕುಳ: ಸೆ.16 ಸೋಮವಾರದಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶ

 

ಅದೇ ರೀತಿ ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಶಾಲೆಯ ಕೊಠಡಿಗಳನ್ನು ಹೊರತು ಪಡಿಸಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಮನೆಯಲ್ಲಿಯೇ ಶಾಲೆಯ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಶಕ್ತಿ ವಸತಿ ಶಾಲೆಯು ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಕ್ರಿಸ್‍ಮಸ್‍ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಕ್ರಿಸ್‍ಮಸ್‍ಟ್ರೀ, ಕ್ರಿಸ್‍ಮಸ್‍ಗ್ರೀಟಿಂಗ್ಸ್, ಕ್ರಿಸ್‍ಮಸ್ ಸ್ಟಾರ್‍ತಯಾರಿಕೆ, ಚಿತ್ರಕಲೆ ಹಾಗೂ ಕ್ರಿಸ್‍ಮಸ್ ಸಂತನಂತೆ ಉಡುಪು ಧರಿಸಿ ನರ್ತಿಸುವ ಸ್ಪರ್ಧೆಯನ್ನು ಏರ್ಪಡಿಸಿದೆ.

 

ಈ ನಿಮಿತ್ತ ವಿದ್ಯಾರ್ಥಿಗಳಿಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಶಾಲಾ ಶಿಕ್ಷಕರು, ಪ್ರಾಂಶುಪಾಲರು, ಆಡಳಿತ ಮಂಡಳಿಯವರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಿ, ಹೊಸ ವರುಷದ ನವ ಚೇತನ ವಿಶ್ವದೆಲ್ಲೆಡೆ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಕೆಯನ್ನು ವ್ಯಕ್ತ ಪಡಿಸಿದ್ದಾರೆ.

error: Content is protected !!
Scroll to Top