ಸುಳ್ಯ: ಆಸ್ಪತ್ರೆಯ ಮಹಡಿಯಿಂದ ಹಾರಿ ವೃದ್ಧ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.20. ಪುತ್ರನಿಂದ ಹಲ್ಲೆಗೊಳಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಆಸ್ಪತ್ರೆಯ 2ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರದಂದು ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾಸರಗೋಡು ಬಂದಡ್ಕದ ಬಿಲ್ಲರಮಜಲು ನಿವಾಸಿ ಲಕ್ಷ್ಮಣ ಗೌಡ (69) ಎಂದು ಗುರುತಿಸಲಾಗಿದೆ. ಲಕ್ಷ್ಮಣ ಗೌಡರಿಗೂ ಅವರ ಮಗನಿಗೂ ಜಗಳವಾಗಿದ್ದು, ಮಗ ತಂದೆಗೆ ಅಡಿಕೆ ಸಲಾಕೆಯಿಂದ ಹೊಡೆದಿದ್ದನೆನ್ನಲಾಗಿದೆ. ಇದರಿಂದ ಗಾಯಗೊಂಡಿದ್ದ ಲಕ್ಷ್ಮಣ ಗೌಡರನ್ನು ಚಿಕಿತ್ಸೆಗಾಗಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ತನ್ನ ಜತೆಗಿದ್ದ ಅಳಿಯ ಊಟ ತರಲೆಂದು ವಾರ್ಡಿನಿಂದ ಹೊರಗೆ ಹೋದ ಸಂದರ್ಭದಲ್ಲಿ ಲಕ್ಷ್ಮಣ ಗೌಡರು ಹೊರಗೆ ಬಂದು ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಕುಮಾರಧಾರ ನದಿಯಲ್ಲಿ ಮೃತದೇಹ ಪತ್ತೆ ➤ ಕಡಬ ಪೊಲೀಸರಿಂದ ಪರಿಶೀಲನೆ

error: Content is protected !!
Scroll to Top