ಎಸಿಬಿ ಇನ್ಸ್‌ಪೆಕ್ಟರ್ ಗೆ ಬಟ್ಟೆ ಬಿಚ್ಚಿ ಕರೆಮಾಡಿದ ಯುವತಿ ➤ ನಂತರ ನಡೆದಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.12. ಎಸಿಬಿ ಇನ್ಸ್‌ಪೆಕ್ಟರ್ ಗೆ ಅಶ್ಲೀಲ ವಿಡಿಯೊ ಕರೆ ಮಾಡಿದ್ದ ಯುವತಿಯೋರ್ವಳು, ಅದರ ಸ್ಕ್ರೀನ್ ಶಾಟ್ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸಿಬಿ ಇನ್ಸ್‌ಪೆಕ್ಟರ್ ರವರ ಫೇಸ್‌ಬುಕ್‌ ಖಾತೆಗೆ ನಗ್ನ ಯುವತಿಯಿಂದ ವೀಡಿಯೋ ಕರೆಯೊಂದು ಬಂದಿದ್ದು, ಅದನ್ನು ನೋಡಿದ ಇನ್‌ಸ್ಪೆಕ್ಟರ್ ಕೂಡಲೇ ಕರೆಯನ್ನು ಕಡಿತಗೊಳಿಸಿದ್ದರು. ಕೆಲ ನಿಮಿಷಗಳ ನಂತರ ನಗ್ನ ವೀಡಿಯೊ ಕರೆಯ ಸ್ಕ್ರೀನ್‌ ಶಾಟನ್ನು ಇನ್‌ಸ್ಪೆಕ್ಟರ್‌ಗೆ ಕಳುಹಿಸಿದ್ದ ಯುವತಿಯು 11 ಸಾವಿರ ರೂ‌. ನೀಡುವಂತೆ ಪೀಡಿಸಿದ್ದಾಳೆ. ಹಣ ನೀಡದಿದ್ದರೆ ವೀಡಿಯೊ ಕರೆಯ ಸ್ಕ್ರೀನ್‌ ಶಾಟ್ ಹಾಗೂ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಕೃತ್ಯದ ಬಗ್ಗೆ ಎಸಿಬಿ ಇನ್‌ಸ್ಪೆಕ್ಟರ್ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ.

Also Read  ಉಡುಪಿ: ಕ್ವಾರೆಂಟೈನ್‌ನಲ್ಲಿದ್ದ ವ್ಯಕ್ತಿ ಸಾವು, ಕೊರೋನ ಶಂಕೆ

error: Content is protected !!
Scroll to Top