ಮಂಗಳೂರಿನಲ್ಲೋರ್ವ ಕಾರಿನ ಹೃದಯ ತಜ್ಞ ‘ಕಾರ್ ಕಾರ್ಡಿಯಾಕ್ ಕೇರ್’ ➤ ವಿನೂತನ ತಂತ್ರಜ್ಞಾನ ಬಳಸಿ ಕ್ಷಣಮಾತ್ರದಲ್ಲಿ ಇಂಜಿನ್ ಕ್ಲೀನಿಂಗ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.06. ನಿಮ್ಮಲ್ಲಿರುವ ಕಾರು ಮೈಲೇಜ್ ಕಡಿಮೆ ನೀಡುತ್ತಿದೆಯೇ..? ಪಿಕಪ್ ಕಡಿಮೆ ಇದೆಯೇ..? ದಟ್ಟ ಹೊಗೆ ಬಿಡುತ್ತಿದೆಯೇ..? ಚಿಂತೆ ಬಿಡಿ… ಇದೀಗ ಮಂಗಳೂರಿನ ಮೇರಿಹಿಲ್ ನಲ್ಲಿರುವ ಕಾರಿನ ಹೃದಯ ತಜ್ಞ ‘ಕಾರ್ ಕಾರ್ಡಿಯಾಕ್ ಕೇರ್’ ನಲ್ಲಿದೆ ಸೂಕ್ತ ಪರಿಹಾರ.

ಪಂಜದ ಪಶುವೈದ್ಯ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರ ಪುತ್ರ ಪುನೀತ್ ಕಾನತ್ತೂರು ಅವರು ನೂತನ ತಂತ್ರಜ್ಞಾನದಿಂದ ಕೂಡಿರುವ ಪರಿಸರಸ್ನೇಹಿ ಉದ್ಯಮವನ್ನು ಆರಂಭಿಸಿದ್ದು, ಈ ತಂತ್ರಜ್ಞಾನದಲ್ಲಿ ಕೆಮಿಕಲ್ ರಹಿತವಾಗಿ ವಾಹನಗಳ ಇಂಜಿನ್ ನಲ್ಲಿರುವ ಕಾರ್ಬನ್ ಗಳನ್ನು ಹೊರತೆಗೆಯುವ ಮೂಲಕ ವಾಹನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಇಂಧನ ಉಳಿತಾಯದೊಂದಿಗೆ ಇಂಜಿನ್ ಬಾಳಿಕೆಯನ್ನು ದ್ವಿಗುಣಗೊಳಿಸಲಾಗುತ್ತದೆ. ಇಂಜಿನಿಯರಿಂಗ್ ಪದವೀಧರರಾಗಿರುವ ಪುನೀತ್, ಕೇರಳದಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಕಾರ್ ಕಾರ್ಡಿಯಾಕ್ ಕೇರ್ ಸಂಸ್ಥೆಯ ಶಾಖೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮಂಗಳೂರಿನ ಮೇರಿಹಿಲ್ ಎಂಬಲ್ಲಿ ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಇಂಜಿನ್ ಗಳಲ್ಲಿರುವ ಕಾರ್ಬನ್ ಗಳನ್ನು ನಿಯಮಿತವಾಗಿ ಹೊರತೆಗೆಯುವುದರಿಂದ, ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ಪ್ರಮಾಣ ಬಹುತೇಕ ಕಡಿಮೆಯಾಗುತ್ತದೆ. ಅಲ್ಲದೆ ವಾಹನಗಳ ಇಂಜಿನ್ ಶಬ್ದ ಕಡಿಮೆಯಾಗುವುದರೊಂದಿಗೆ ಪಿಕಪ್ ಹಾಗೂ ಮೈಲೇಜ್ ಅಧಿಕವಾಗುತ್ತದೆ. ಪ್ರತೀ 20 ಸಾವಿರ ಕಿಲೋಮೀಟರ್ ಗೆ ಒಂದು ಸಲ ನಿಮ್ಮ ವಾಹನದ ಇಂಜಿನ್ ನ ಕಾರ್ಬನ್ ಹೊರ ತೆಗೆಯುತ್ತಿದ್ದರೆ ವಾಹನದ ಕಾರ್ಯಕ್ಷಮತೆಯಲ್ಲಿ ಉತ್ತಮ ಬದಲಾವಣೆ ಕಾಣಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9164477477 ಅಥವಾ 9482499477 ಸಂಪರ್ಕಿಸಬಹುದಾಗಿದೆ.

Also Read  ಓಂ ಶ್ರೀ ನರಸಿಂಹಸ್ವಾಮಿ ನೆನೆಯುತ್ತ ಹಿಂದಿನ ದಿನ ಭವಿಷ್ಯ ವನ್ನು ತಿಳಿದುಕೊಳ್ಳಿ ಈ ಐದು ರಾಶಿಯವರಿಗೆ ಶುಭಫಲ ದೊರೆಯುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top