ನಾಳೆ(ಡಿ.07) ಆಲಂಕಾರಿನಲ್ಲಿ MRPL ಪೆಟ್ರೋಲ್ ಪಂಪ್ ರತ್ನಶ್ರೀ ಎಂಟರ್‌ಪ್ರೈಸಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.06. ರತ್ನಶ್ರೀ ಸೌಹಾರ್ದ ಸಹಕಾರಿ ಕಡಬ, ರತ್ನಶ್ರೀ ಫೈನಾನ್ಸ್ ಕಾರ್ಪೋರೇಶನ್ ಕಡಬ ಇವರ ಸಹ ಸಂಸ್ಥೆ ಎಂಆರ್‌ಪಿಎಲ್ ಹೆಚ್‌ಐಕ್ಯು ಪೆಟ್ರೋಲ್ ಪಂಪ್ ರತ್ನಶ್ರೀ ಎಂಟರ್‌ಪ್ರೈಸಸ್ ನಾಳೆ (ಡಿ.07) ಬೆಳಗ್ಗೆ ಆಲಂಕಾರಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ಗ್ರೂಪ್ ಜನರಲ್ ಮ್ಯಾನೇಜರ್ ಹೆಚ್.ಸಿ.ಸತ್ಯನಾರಾಯಣ ಅವರು ಉದ್ಘಾಟಿಸಲಿದ್ದು, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲೆಯಲ್ಲಿ ಎಂಆರ್‌ಪಿಎಲ್‌ನ ಪ್ರಥಮ ಡೀಲರ್ ಔಟ್‌ಲೆಟ್ ಇದಾಗಿದ್ದು, ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇಲ್ಲಿ ಅಧಿಕ ಮೈಲೇಜ್ ಸಿಗುವ ಉತ್ಕೃಷ್ಟ ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದ್ದು, ಮಿತದರದಲ್ಲಿ ಮಾರಾಟ ಆಗಲಿದೆ. ಉಚಿತ ನೈಟ್ರೋಜನ್ ಮತ್ತು ಏರ್, ಡಿಜಿಟಲ್ ಪಾವತಿ ಸೌಲಭ್ಯದೊಂದಿಗೆ ತ್ವರಿತ ಸೇವೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆಯೂ ಒಳಗೊಂಡಿದೆ. ಗ್ರಾಹಕರಿಗೆ ಬೆಳಗ್ಗೆ 06 ರಿಂದ ರಾತ್ರಿ 10 ಗಂಟೆಯ ತನಕ ನಿರಂತರ ಸೇವೆ ಸಿಗಲಿದೆ ಎಂದು ಸಂಸ್ಥೆಯ ಮಾಲಕ ರಾಧಾಕೃಷ್ಣ ಕೆ.ಎಸ್. ಅವರು ತಿಳಿಸಿದ್ದಾರೆ.

Also Read  ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಯೋಣ - ಗಿರಿಧರ ಭಟ್

error: Content is protected !!
Scroll to Top