ಕೋವಿಡ್ ಲಸಿಕೆ ತೆಗೆದುಕೊಂಡಿದ್ದ ಸಚಿವ ಅನಿಲ್ ವಿಜ್ ಗೆ ಕೊರೋನಾ.!

(ನ್ಯೂಸ್ ಕಡಬ) newskadaba.com ಚಂಡೀಘಡಡಿ. 05: ಈ ಹಿಂದೆ ಪ್ರಯೋಗಾರ್ಥ ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡಿದ್ದ ಹರ್ಯಾಣದ ಸಚಿವರಿಗೇ ಕೊರೋನಾ ಸೋಂಕು ಕಂಡು ಬಂದಿದೆ .ಹರ್ಯಾಣ ಸಚಿವ ಅನಿಲ್ ವಿಜ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಕುರಿತಂತೆ ಅವರೇ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಕಳೆದ 10 ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಪಡುವಂತೆ ಮನವಿ ಮಾಡಿದ್ದಾರೆ.

ಕಳೆದ ನವೆಂಬರ್ 20ರಂದು ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ 3ನೇ ಹಂತದ ಪರೀಕ್ಷೆಯಲ್ಲಿ ಸಚಿವ ಅನಿಲ್ ವಿಜ್ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು, ಹರ್ಯಾಣದ ಆಂಬಾಲದಲ್ಲಿ ನಡೆದಿದ್ದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಲಸಿಕೆಯ ಒಂದು ಡೋಸ್ ಅನ್ನು ಹಾಕಿಸಿಕೊಳ್ಳುವ ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು. ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದಲ್ಲಿ ಈ ಲಸಿಕೆಯನ್ನು ಸುಮಾರು 26000 ಸಾವಿರ ಜನರ ಮೇಲೆ ಪ್ರಯೋಗಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ.

Also Read  ನಿಲ್ಲದ ಭ್ರೂಣ ಹತ್ಯೆ- ಮೂವರು ಅರೆಸ್ಟ್..!

 

error: Content is protected !!
Scroll to Top