(ನ್ಯೂಸ್ ಕಡಬ) newskadaba.com ಭಟ್ಕಳ, ಡಿ.04: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಎಂ.ಎಸ್ಸಿ. (ಕೀಟ ಶಾಸ್ತ್ರ) ವಿಭಾಗದಲ್ಲಿ ಮುರ್ಡೇಶ್ವರದ ಸಮತಾ ಹೆಗ್ಡೆ ಟಾಪರ್ ಆಗಿ ಚಿನ್ನದ ಪದಕ ಪಡೆದಿದ್ದಾರೆ.
ಜಿ.ಕೆ.ವಿ.ಕೆ. ಹೆಬ್ಬಾಳದಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಎಂ.ಎಸ್ಸಿ (ಕೀಟ ಶಾಸ್ತ್ರ)ದಲ್ಲಿ ಟಾಪರ್ ಆಗಿ ಹೊರ ಹೊಮ್ಮಿರುವ ಇವರು ಪ್ರಸ್ತುತ ಬೇಯರ್ಸ್ (ಜರ್ಮನಿ) ಕಂಪೆನಿಯಲ್ಲಿ ಕೀಟ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುರ್ಡೇಶ್ವರ ನಿಸರ್ಗ ರೆಸಿಡೆನ್ಸಿಯ ಜಯಾನಂದ ಹೆಗ್ಡೆ ಹಾಗೂ ಶಾಲಿನಿ ಹೆಗ್ಡೆ ದಂಪತಿಯ ಪುತ್ರಿ.ಇವರು ಕುಂದಾಪುರದ ಆರ್.ಎನ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿ, ಬಿ.ಎಸ್ಸಿ. ಕೃಷಿ ಪದವಿಯನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲದಲ್ಲಿ ಪೂರೈಸಿದ್ದಾರೆ.