ಕಡಬದಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ಬೆಳೆಯುತ್ತಿರುವ ಕಡಬ ಪಟ್ಟಣದಲ್ಲಿ ಹೊಸದಾಗಿ ಮೊಬೈಲ್ ಮಾರಾಟ ಮಳಿಗೆಯೊಂದು ಸೋಮವಾರದಂದು ಶುಭಾರಂಭಗೊಂಡಿತು.

ಕಡಬದ ಮುಖ್ಯ ರಸ್ತೆಯ ಕೆ.ಜೆ. ಚಿಕನ್ ಸೆಂಟರ್ ಬಳಿಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಆರಂಭವಾದ ಶ್ರೀ ಲಕ್ಷ್ಮೀ ಮೊಬೈಲ್ ಮಾರಾಟ ಮತ್ತು ಸೇವಾ ಸಂಸ್ಥೆಯನ್ನು ಮಾಲಕರ ಹೆತ್ತವರಾದ ಚಿತ್ತರಂಜನ್ ಹಾಗೂ ಯಮುನಾ ದಂಪತಿ ದೀಪ ಬೆಳಗಿಸುವ‌ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸುಂದರ್ ನಾಯ್ಕ್, ಭಗೀರಥಿ ಟವರ್ ಮಾಲಕರಾದ ದಯಾನಂದ ನಾಯ್ಕ್, ಸರಸ್ವತೀ ವಿದ್ಯಾ ಸಂಸ್ಥೆಯ ವೆಂಕಟರಮಣ ರಾವ್ ಮಂಕುಡೆ, ಉಷಾ ಸ್ಟುಡಿಯೋ ಮಾಲಕ ಸೀತಾರಾಮ್, ಪ್ರಮುಖರಾದ ಜಯ ಈಶ್ವರಮಂಗಲ, ಸಂತೋಷ್ ಕೋಡಿಬೈಲು, ಗೋಪಾಲ ನಾಯ್ಕ್ ಮೇಲಿನಮನೆ ಮೊದಲಾದವರು ಉಪಸ್ಥಿತರಿದ್ದರು.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ - ದಿನ ಭವಿಷ್ಯ

ಸಂಸ್ಥೆಯ ಮಾಲಕರಾದ ಪ್ರದೀಪ್ ಕೆ, ಪೂರ್ಣಿಮಾ ಪ್ರದೀಪ್ ಹಾಗೂ ಸನತ್ ಕುಮಾರ್ ಅತಿಥಿಗಳನ್ನು ಬರಮಾಡಿಕೊಂಡರು. ನೂತನ ಸಂಸ್ಥೆಯಲ್ಲಿ ಎಲ್ಲಾ ಕಂಪೆನಿಯ ಮೊಬೈಲ್ ಮಾರಾಟ ಮತ್ತು ರಿಪೇರಿ, ಮೊಬೈಲ್, ಟಿವಿ ರೀಚಾರ್ಜ್, ಜೆರಾಕ್ಸ್, ಕಲರ್ ಪ್ರಿಂಟ್, ಆರ್.ಟಿ.ಸಿ, ಲ್ಯಾಮಿನೇಶನ್ ಸೇವೆ ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರಾದ ಪ್ರದೀಪ್ ಕೆ. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9071839893 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

error: Content is protected !!
Scroll to Top