ತಲೆ, ಕೈಕಾಲು ಕತ್ತರಿಸಿ ಯುವತಿಯ ಬರ್ಬರ ಹತ್ಯೆ



(ನ್ಯೂಸ್ ಕಡಬ) newskadaba.com ಮಂಡ್ಯ ನ. 19: ಯುವತಿಯ ತಲೆ, ಕೈಕಾಳು ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದ್ದು, ಹತ್ಯೆಯ ಬಳಿಕ ಹೇಮಾವತಿ ನದಿಗೆ ಯುವತಿಯ ದೇಹದ ಭಾಗಗಳನ್ನು ಎಸೆಯಲಾಗಿದೆ.







 

 ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯುವತಿಯ ದೇಹದ ಅಂಗಗಳು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಲೆಯಲ್ಲಿ ಯುವತಿಯ ದೇಹದ ಜೊತೆಗೆ ಕೈಕಾಲುಗಳೂ ಪತ್ತೆಯಾಗಿದ್ದು, ಕೈಯಲ್ಲಿ ಮೀನಿನ ಚಿತ್ರವಿರುವ ಹಚ್ಚೆ ಗುರುತು ಇದೆ.ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಬಳಿಯಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯ ಗುರುತು ಪತ್ತೆ ಇನ್ನೂ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






 

error: Content is protected !!
Scroll to Top