ಸುಳ್ಯ: ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ವತಿಯಿಂದ ಮೌಲೀದ್ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ನ. 16. ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅರಂತೋಡು (ರಿ) ವತಿಯಿಂದ ರಬೀಉಲ್ ಅವ್ವಲ್ ತಿಂಗಳ ಮೌಲೀದ್ ಪಾರಾಯಣ ಕಾರ್ಯಕ್ರಮವು ನ.15 ರಂದು ಅರಂತೋಡು ಉದಯನಗರ ಶಾದಿಮಹಲ್ ಕಛೇರಿಯಲ್ಲಿ ನಡೆಯಿತು.


ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಬಹು ಅಲ್ಹಾಜ್ ಇಸ್ಹಾಕ್ ಬಾಖವಿ ಅವರು ಮೌಲೀದ್ ಪಾರಾಯಣಕ್ಕೆ ನೇತೃತ್ವ ನೀಡಿದರು. ಸಮಾರಂಭದಲ್ಲಿ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಾಜಿ ಅಶ್ರಫ್ ಗುಂಡಿ, ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿ ಫಸೀಲು, ಜಮಾ ಅತ್ ಮಾಜಿ ಅಧ್ಯಕ್ಷರಾದ ಹಾಜಿ ಕೆ.ಎಮ್ ಮಹಮ್ಮದ್, ಹಾಜಿ ಎಸ್.ಇ.ಮಹಮ್ಮದ್, ಅಬ್ದುಲ್ ಖಾದರ್ ಪಠೇಲ್, ಎಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಎ.ಹನೀಫ್, ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಎಸೋಸಿಯೇಶನ್ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ, ಅನ್ವರ್.ಕೆ.ಎಂ, ನಿರ್ದೇಶಕರಾದ ಮನ್ಸೂರ್ ಪಾರೆಕ್ಕಲ್, ಹಾಜಿ ಅಝರುದ್ದೀನ್, ಕೆ.ಎಮ್.ಜವಾದ್ ಪಾರೆಕ್ಕಲ್, ತಾಜುದ್ದೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.

Also Read  ಸುಳ್ಯ: ರಸ್ತೆ ಬದಿನಿಂತಿದ್ದ ಕಾರಿಗೆ ಸ್ಕೂಟಿ ಢಿಕ್ಕಿ

error: Content is protected !!
Scroll to Top