ಕೋವಿಡ್‌ ಪ್ರಮಾಣಪತ್ರವಿಲ್ಲದೆ ಕಾಲೇಜುಗಳಿಗೆ ಪ್ರವೇಶವಿಲ್ಲ ➤ ದ.ಕ. ಜಿಲ್ಲಾಡಳಿತ

(ನ್ಯೂಸ್ ಕಡಬ) newskadaba.com ಮಂಗಳೂರು . 16: ನ.17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಕಾಲೇಜಿಗೆ ಹಾಜರಾಗುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಂಡು ಪ್ರಮಾಣಪತ್ರದೊಂದಿಗೆ ಹಾಜರಾಗಬೇಕು ಎಂದು ದ.ಕ. ಜಿಲ್ಲಾಡಳಿತ ಹೇಳಿದೆ.ವಿದ್ಯಾರ್ಥಿಗಳು ಕೋವಿಡ್‌ ಟೆಸ್ಟನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದಾಗಿದೆ.

ಈಗಾಗಲೇ ಕೋವಿಡ್‌ ಟೆಸ್ಟ್‌ ಮ್ಯಾಪಿಂಗ್‌ ಕಾಲೇಜುಗಳಿಗೆ ಲಿಂಕ್‌ ಮಾಡಲಾಗಿದೆ. ಕೋವಿಡ್‌ ಟೆಸ್ವ್‌ ಪ್ರಮಾಣಪತ್ರ ಹೊಂದದೇ ಇರುವ ವಿದ್ಯಾರ್ಥಿಗಳಿಗೆ ಪ್ರವೇಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನ.17ರಂದು ಕಾಲೇಜು ಆರಂಭವೆಂದು ಎರಡು ದಿನಗಳ ಹಿಂದೆಯೆಷ್ಟೇ ಹೇಳಿರುವ ಜಿಲ್ಲಾಡಳಿತ, ನ.15ರಂದು ಕೋವಿಡ್‌ ಪ್ರಮಾಣಪತ್ರ ಕಡ್ಡಾಯ ಮಾಡಿದೆ.

 

Xl

 

Scroll to Top