ಮಂಗಳೂರು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು



(ನ್ಯೂಸ್ ಕಡಬ) newskadaba.com ಮಂಗಳೂರು.9: ಮೂಡಬಿದಿರೆಯ ಬೆಳುವಾಯಿ ಎಂಬಲ್ಲಿ ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುರತ್ಕಲ್ ಕಾಟಿಪಳ್ಳ ನಿವಾಸಿ ನಿಹಾಲ್ ಶಾ(20) ಎಂದು ಗುರುತಿಸಲಾಗಿದೆ.







 

 

 

ಸ್ನೇಹಿತರ ಜೊತೆಗೂಡಿ ನಿಹಾಲ್ ಈಜಲು ತೆರಳಿದ್ದರು. ಮಠದಕೆರೆ ಎಂಬಲ್ಲಿ ಕೆರೆಗೆ ಇಳಿದಿದ್ದ ವೇಳೆ ನೀರಲ್ಲಿ ಮುಳುಗಿ ನಿಹಾಲ್ ಶಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಈಜುಗಾರ ಅಂಥೋಣಿ ಯವರು ಧಾವಿಸಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಮೂಡಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

 

error: Content is protected !!
Scroll to Top