ಪುತ್ತೂರು: ಓಮ್ನಿ ಕಾರು ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, .8: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ದಿನ ಮಾರುತಿ ಓಮ್ನಿ ಕಾರೊಂದು ಕಳವಾಗಿದೆ.

 

 

ಪುತ್ತೂರು ಉಪ ನೋಂದಣಿ ಕಛೇರಿಗೆ ಬಂದಿದ್ದ ಬಜತ್ತೂರು ನಿವಾಸಿ ಉಮೇಶ್ ಗೌಡ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯ ಚಿಣ್ಣರ ಪಾರ್ಕ್ ಬಳಿ ಪಾರ್ಕಿಂಗ್ ಮಾಡಿದ್ದರು ಅವರು ಕಛೇರಿಯಿಂದ ಕೆಲಸ ಮುಗಿಸಿ ಹಿಂದಿರಗುವಾಗ ಮಾರುತಿ ಓಮ್ನಿ ಕಾರೊಂದು ಕಳವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.

 

 

Scroll to Top