ಕಳೆಂಜ: ಹೊಳೆ ದಾಟುತ್ತಿದ್ದ ವೇಳೆ ಜಾರಿ ಬಿದ್ದು ಬಾಲಕ ಮೃತ್ಯು



(ನ್ಯೂಸ್ ಕಡಬ) newskadaba.com ಕಳೆಂಜ . 07: ಕಳೆಂಜದಲ್ಲಿ ಬಾಲಕನೋರ್ವ ಹೊಳೆ ದಾಟುತ್ತಿದ್ದಾಗ ಕಾಲು ಜಾರಿ ಹೊಳೆ ಬಿದ್ದು ಮೃತ ಪಟ್ಟ ಘಟನೆ ಇಂದು ನಡೆದಿದೆ. ಮೊಗ್ರ ಗ್ರಾಮದ ಮುಗೆರಡ್ಕ ಅಲೆಕ್ಕಿ ನಿವಾಸಿ ಧರ್ಣಪ್ಪ ಗೌಡ ಮತ್ತು ಯಮುನಾ ದಂಪತಿಯ ಪುತ್ರ ದುರ್ಗೇಶ್ (17) ಮೃತ ಬಾಲಕ.







ಸಂಬಂಧಿಕರ ಮನೆಗೆ ಬಂದಿದ್ದ ದುರ್ಗೇಶ್ ತನ್ನ ಸಹೋದರ ಹಾಗೂ ಸಹೋದರಿಯ ಜೊತೆ ಪಂಜಾಲ ಎಂಬಲ್ಲಿನ ಹೊಳೆಯನ್ನು ದಾಟುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿದ್ದಾರೆ. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 






error: Content is protected !!
Scroll to Top