ಬಾಂಗ್ಲಾ ವಿರುದ್ಧದ ಆಸ್ಟ್ರೇಲಿಯದ ಆಟಕ್ಕೆ ಮಳೆ ಅಡ್ಡಿ

 

(ನ್ಯೂಸ್ ಕಡಬ) newskadaba.com ಕಿಂಗ್‌ಸ್ಟನ್ ಓವಲ್, ಜೂ.5. ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಇಂದು ಗೆಲುವಿಗೆ 183 ರನ್‌ಗಳ ಸವಾಲನ್ನು ಪಡೆದಿರುವ ಆಸ್ಟ್ರೇಲಿಯ ತಂಡದ ಆಟಕ್ಕೆ ಮಳೆ ಅಡ್ಡಿಯಾಗಿದೆ. ಆಸ್ಟ್ರೇಲಿಯ ಇನಿಂಗ್ಸ್ ಆರಂಭಿಸಿ 16 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 83 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿದೆ. ಆ್ಯರೊನ್ ಫಿಂಚ್ 19 ರನ್ ಗಳಿಸಿ ಔಟಾಗಿದ್ಧಾರೆ. ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 40 ರನ್ ಮತ್ತು ನಾಯಕ ಸ್ಟೀವನ್ ಸ್ಮಿತ್ 22 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

Also Read  ವ್ಯಾಸನಕೆರೆ ಪ್ರಭಾಂಜನಚಾರ್ಯರಿಗೆ ‘ಕನಕ ಶ್ರೀ ಪ್ರಶಸ್ತಿ’ ಪ್ರದಾನ

ಸ್ಟಾರ್ಕ್ ದಾಳಿಗೆ ಸಿಲುಕಿದ ಬಾಂಗ್ಲಾ: ಮಿಚೆಲ್ ಸ್ಟಾರ್ಕ್ ನೇತೃತ್ವದಲ್ಲಿ ಆಸ್ಟ್ರೇಲಿಯದ ಸಂಘಟಿತ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ. ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ 44.3 ಓವರ್‌ಗಳಲ್ಲಿ 182 ರನ್‌ಗಳಿಗೆ ಆಲೌಟಾಗಿದೆ. ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ದಾಖಲಿಸಿದ 95 ರನ್‌ಗಳ ಸಹಾಯದಿಂದ ಬಾಂಗ್ಲಾಕ್ಕೆ ಮೂರಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಿತ್ತು.

 

error: Content is protected !!
Scroll to Top