ದರ್ಬೆ ಬೈಪಾಸ್ ಬಳಿ ಅಪಘಾತ ಪ್ರಕರಣ ➤ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, . 03. ಕಳೆದ ದಿನ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಗರದ ದರ್ಬೆ ಬೈಪಾಸ್ ಬಳಿ ಅಪಘಾತ ನಡೆದಿದಿತ್ತು. ಈಯೊಂದು ಅಪಘಾತದಲ್ಲಿ ಪಾದಚಾರಿ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ವ್ಯಕ್ತಿಯನ್ನು ಪುತ್ತೂರು ನಗರದ ಪಡೀಲ್ ನಿವಾಸಿಗಳಾದ ಗೋಪಿನಾಥ್ ಹಾಗೂ ಕವಿತಾ ದಂಪತಿಯವರ ಪುತ್ರಿ ಸ್ವಾತಿ(7) ಹಾಗೂ ಗೀತಾ(44) ಎಂದು ಗುರುತಿಸಲಾಗಿದೆ.

 

 

ಸ್ವಾತಿ ಕಳೆದ ದಿನ ಘಟನಾ ಸ್ಥಳದಲ್ಲೆ ಮೃತಪಟ್ಟಿದ್ದು, ಗೀತಾ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರ ಗಾಯಗೊಂಡಿದ್ದ ಸ್ವಾತಿಯ ಅಕ್ಕ ಅನನ್ಯಾ(9) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೃತಪಟ್ಟ ಸ್ವಾತಿ ಇಲ್ಲಿನ ಮಾಯಿದೇವುಸ್‌‌ ಶಾಲೆಯಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಅನನ್ಯಾ 3ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಪುತ್ತೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

Scroll to Top