(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.30. ತನ್ನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುವ ಕಾರಣ ಠಾಣೆಗೆ ದೂರು ನೀಡಿದ್ದಕ್ಕೆ ಗಂಡ ಹಾಗೂ ಮಗನಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೋರ್ವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ಸಜೀವ ಎಂಬಾತನು ಸ್ಥಳೀಯ ಬಾಲಕಿಗೆ ನಿರಂತರ ಕಿರುಕುಳ ನೀಡುತ್ತಿರುವುದನ್ನು ಆಕ್ಷೇಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆತನ ಕಿರುಕುಳ ತಾಳಲಾರದೆ ಬಾಲಕಿಯು ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳೆನ್ನಲಾಗಿದೆ. ದೂರಿಗೆ ಪ್ರತೀಕಾರವಾಗಿ ಆರೋಪಿಯು ಬಾಲಕಿಯ ತಂದೆ ಹಾಗೂ ಅಣ್ಣನಿಗೆ ಹಲ್ಲೆ ನಡೆಸಿರುವುದಾಗಿ ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲಕಿಯ ಮನೆಯವರು ತಮ್ಮ ಜೀವಕ್ಕೆ ರಕ್ಷಣೆ ಕೋರಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೋಲಿಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.