’ಅದಾನಿ ಏರ್ ಪೋರ್ಟ್’ ಆಗಿ ಬದಲಾವಣೆಯಾದ ಮಂಗಳೂರು ವಿಮಾನ ನಿಲ್ದಾಣ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 01. ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ‘ಅದಾನಿ ಏರ್‌ಪೋರ್ಟ್‌’ ಆಗಿ ಬದಲಾವಣೆ ಮಾಡಲಾಗಿದೆ.

ಈ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಅದಾನಿ ಗ್ರೂಪ್‌ ವಹಿಸಿಕೊಂಡಿದೆ. ಶುಕ್ರವಾರ ಮಧ್ಯರಾತ್ರಿ ವಿಮಾನ ನಿಲ್ದಾಣದ ನಿರ್ದೇಶಕರು ಸಾಂಕೇತಿಕವಾಗಿ ಅದಾನಿ ಗ್ರೂಪ್‌ ಅಧಿಕಾರಿಗಳಿಗೆ ಕೀ ಹಸ್ತಾಂತರಿಸುವ ಮೂಲಕ ಇದರ ಹಸ್ತಾಂತರ ಪ್ರಕ್ರಿಯೆ ನೆರವೇರಿಸಿದರು. ಇದರಿಂದಾಗಿ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣ ಅದಾನಿ ಏರ್‌ಪೋರ್ಟ್‌ ಆಗಿ ಬದಲಾವಣೆಗೊಂಡಿದ್ದು, ವಿಮಾನ ಹಾರಾಟ ಹೊರತುಪಡಿಸಿದರೆ, ಬೇರೆ ಎಲ್ಲಾ ನಿರ್ವಹಣೆಯ ಪೂರ್ಣ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್‌ ನಿರ್ವಹಿಸಲಿದೆ.

Scroll to Top