ಕಾರ್ಕಳ : ಕಾರಣಿಕ ದೈವ ಕೊರಗಜ್ಜನ ಹಾಡು ಹಾಡಿ ವೈರಲ್ ಆದ ಪುಟ್ಟ ಪೋರ

(ನ್ಯೂಸ್ ಕಡಬ) newskadaba.com ಹಿರ್ಗಾನ ನ. 01: ಇಲ್ಲೊಬ್ಬ ಪುಟ್ಟ ಬಾಲಕ ತುಳುನಾಡಿನ ಪ್ರಸಿದ್ಧ ಕಾರಣಿಕ ದೈವ ಕೊರಗಜ್ಜ ನ ಹಾಡನ್ನ ಹಾಡಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾನೆ.

 

ಇಂದಿನ ಮಕ್ಕಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಗಂಟೆಗಟ್ಟಲೇ ಸಮಯ ವ್ಯಯಿಸುತ್ತಲೇ ಇರುತ್ತಾರೆ. ಆದರೆ ಈ ಪುಟ್ಟ ಬಾಲಕ ತನ್ನ ಮುಗ್ಧ ಭಕ್ತಿಯಿಂದ ತುಳುನಾಡ ಭಕ್ತಿಗೀತೆಗಳನ್ನು ಕೊಂಚವೂ ತಡವರಿಸದೇ ತಪ್ಪಿಲ್ಲದೇ ಲಯಬದ್ದವಾಗಿ ಹಾಡುತ್ತ ಆನಂದಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈ ಪುಟ್ಟ ಬಾಲಕನ ಹೆಸರು ಕಾರ್ತಿಕ್, ಉಡುಪಿ ಜಿಲ್ಲೆಯ ಕಾರ್ಕಳದ ರಾಜೀವನಗರ ಹಿರ್ಗಾನ ಮೂರೂರಿನ ಪ್ರತಿಭೆ. ಒಂದನೇ ತರಗತಿಯ ವಿದ್ಯಾರ್ಥಿಯಾಗಿರುವ ಈ ಬಾಲಕನ ಧ್ವನಿ ಭಕ್ತಿ ಭಾವದಿಂದ ಕೂಡಿದೆ. ಇದೀಗಾ ಎಲ್ಲರ ವಾಟ್ಸಪ್ ಸ್ಟೇಟಸ್ ಗಳಲ್ಲಿ ಈ ಪುಟ್ಟ ಬಾಲಕನ ಹಾಡೇ ರಾರಾಜಿಸುತ್ತಿದೆ. ಇಂತಹ ತುಳುನಾಡಿನ ಪುಟ್ಟ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕರೆ ತುಳುನಾಡಿನ ಗರಿಮೆ ಬೆಳೆಯುವುದರಲ್ಲಿ ಸಂಶಯವೇಯಿಲ್ಲ.

Also Read  15 ವರ್ಷಗಳಿಂದ ಸಂಗ್ರಸಿಡಲಾದ ರಕ್ತ ಚಂದನಕ್ಕೆ ಕೊನೆಗೂ ಮುಕ್ತಿ..!

 

 

error: Content is protected !!
Scroll to Top