(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 01: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಟ್ವಾಳ ಭಂಡಾರಿಬೆಟ್ಟುವಿನ ಭಂಡಾರಿಬೆಟ್ಟುವಿನ ವಸತಿ ಸಂಕೀರ್ಣದಲ್ಲಿ ಅಕ್ಟೋಬರ್ 20 ರಂದು ಸುರೇಂದ್ರ ಬಂಟ್ವಾಳ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಅಜೆಕಲ ನಿವಾಸಿ ಸತೀಶ್ ಕುಲಾಲ್ , ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ ಯಾನೆ ಗಿರಿ, ಬಂಟ್ವಾಳ ಕಬ್ಬಿನಹಿತ್ಲು ನಿವಾಸಿ ಪ್ರದೀಪ್ ಕುಮಾರ್ ಯಾನೆ ಪಪ್ಪು,ಬಂಟ್ವಾಳ ಮಂಡಾಡಿ ನಿವಾಸಿ ಶರೀಪ್ ಯಾನೆ ಸಯ್ಯದ್ ಶರೀಪ್ ,ವತ್ಸಿ ವಸತಿ ಸಂಕೀರ್ಣದ ಪಾಲುದಾರ ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ ,ಶರಣ್ ಯಾನೆ ಆಕಾಶ್‌ಭವನ ಶರಣ್ ,ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ರಾಜೇಶ್,ದಿವ್ಯರಾಜ್,ಅನಿಲ್ ಪಂಪ್‌ವೆಲ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ 1 ಬೈಕ್,2 ಕಾರು,ಮೊಬೈಲ್ ಹಾಗೂ ನಗದು 2.50 ಲಕ್ಷ ರೂ. ವನ್ನು ವಶಪಡಿಸಲಾಗಿದ್ದು,ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯನಡೆಯುತ್ತಿದೆ. ಆರೋಪಿಗಳ ಬಂಧನಕ್ಕಾಗಿ ಜಿಲ್ಲೆಯ ವಿವಿಧ ಠಾಣೆಗಳ ನುರಿತ ಸಿಬ್ಬಂದಿಗಳನ್ನೊಳಗೊಂಡ 5 ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು. ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಎಸ್ ಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪೈಕಿ ಸತೀಶ್ ಕುಲಾಲ್ ಮತ್ತು ಗಿರೀಶ್ ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ಪ್ರದೀಪ್ ಯಾನೆ ಪಪ್ಪು ಕೊಲೇಗೀಡಾದ ಸುರೇಂದ್ರನ ಸ್ನೇಹಿತನಾಗಿದ್ದರು. ಆರೋಪಿ ಪ್ರದೀಪ್ ತನ್ನ ಚಿನ್ನದ ಉದ್ಯಮಕ್ಕಾಗಿ ಸುರೇಂದ್ರನಿಂದ ಸಾಲಪಡೆದಿದ್ದು, ಅದರಲ್ಲಿ 7 ಲಕ್ಷ ವಾಪಾಸ್ ನೀಡಲು ಬಾಕಿ ಇತ್ತು.ಈ ಹಣವನ್ನು ಅತನಿಗೆ ವಾಪಾಸ್ ಕೊಡುವ ವಿಚಾರದಲ್ಲಿ ಈ ಕೃತ್ಯ ನಡೆಸಲಾಗಿದೆ. ಸದ್ಯ 9 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು,ತನಿಖೆ ಮುಂದುವರಿದೆ.