(ನ್ಯೂಸ್ ಕಡಬ) newskadaba.com ಸುಳ್ಯ ಅ. 31: ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ತೋರಿಸಿದ ಅತಿಯಾದ ವರ್ತನೆ ವಿಷಯದಲ್ಲಿ ಇಬ್ಬರು ಮಕ್ಕಳು ಸಹಾಯವಾಣಿ ಸಂಪರ್ಕಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿದ ಘಟನೆ ನಡೆದಿದೆ.
ಮಡಪ್ಪಾಡಿಯ ಕಡ್ಯಾದ ರೇಷ್ಮಾ ಹಾಗೂ ಯತೀಶ್ ದಂಪತಿಯ ನಾಲ್ಕನೇ ತರಗತಿಯ ಪುತ್ರ ಆರ್ಯ ಕಡ್ಯಾ ಹಾಗೂ ಪವಿತ್ರಾ ಹಾಗೂ ಮಹೇಶ್ ದಂಪತಿಯ ಎಂಟನೇ ತರಗತಿಯ ಪುತ್ರ ಹೃತಿಕ್ ಸುಳ್ಯ-ಗುತ್ತಿಗಾರು ಮಾರ್ಗವಾಗಿ ಸಂಚರಿಸುವ ಬಸ್‌ಗೆ ಹತ್ತಿದ್ದರು. ಈ ವೇಳೆ ನಿರ್ವಾಹಕ ಆರ್ಯಾಗೆ ಪೂರ್ಣ ಟಿಕೇಟ್ ನೀಡಿದ್ದಾರೆ. ಇದನ್ನು ಗಮನಿಸಿದ ಬಾಲಕ ನಾನು ವಿದ್ಯಾರ್ಥಿನಿ ಹಾಗಾಗಿ ನನಗೆ ಅರ್ಧ ಟಿಕೇಟ್ ನೀಡುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ನಿರ್ವಾಹಕ ಟಿಕೇಟ್ ನೀಡಲಾಗಿದ್ದು, ಹಾಗಾಗಿ ಏನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳು ಬಸ್‌ನಲ್ಲಿದ್ದ ಮಕ್ಕಳ ಸಹಾಯವಾಣಿಗೆ ಮೆಸೇಜ್ ಕಳುಹಿಸಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.
ಈ ಕೂಡಲೇ ಇಲಾಖೆ ನಿರ್ವಾಹಕರಿಗೆ ಕರೆ ಮಾಡಿದ್ದು, ಈ ಬಗ್ಗೆ ಕೇಳಿದೆ. ಅಲ್ಲದೇ, ಮಕ್ಕಳು ಬಸ್‌ನಿಂದ ಇಳಿಯುವ ಮುನ್ನ ಟಿಕೆಟ್ ಅನ್ನು ಸರಿಪಡಿಸುವಂತೆ ತಿಳಿಸಿದ್ದಾರೆ. ಬಳಿಕ ನಿರ್ವಾಹಕ ಮಕ್ಕಳು ಇಳಿಯುವ ಮುನ್ನ ಟಿಕೆಟ್ ಸರಿಪಡಿಸಿದ್ದು, ಬಾಕಿ ಮೊತ್ತವನ್ನು ಹಿಂದಿರುಗಿಸಿದ್ದಾರೆ. ಇಲಾಖೆಯ ತ್ವರಿತ ಕ್ರಮವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.