ಮಂಗಳೂರು ವಿವಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ ➤ ಆರೋಪಿ ಪ್ರೊಫೆಸರ್​. ಅರಬಿ ಸೇವೆಯಿಂದ ವಜಾ

(ನ್ಯೂಸ್ ಕಡಬ) newskadaba.com ಮಂಗಳೂರು . 31: ಮಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರನ್ನು ಸೇವೆಯಿಂದ ವಜಾಗೊಳಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿನಿ 2018ರಲ್ಲಿ ಸಾಕ್ಷಿ ಸಮೇತ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ವಿವಿ ಆಡಳಿತದ ಸಮಿತಿ ತನಿಖೆ ಕೈಗೊಂಡ ನಂತರ ವರದಿಯನ್ನು ಅಂದಿನ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಎ.ಎಂ ಖಾನ್‌ ಅವರಿಗೆ ಸಲ್ಲಿಸಲಾಗಿತ್ತು. ಆದರೆ, ವರದಿ ಸಲ್ಲಿಸಿದರೂ ಕೂಡಾ ಅದನ್ನು ಪ್ರಕಟಿಸುವ ಬದಲು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇತ್ತೀಚೆಗೆ ಮಹಿಳಾ ಆಯೋಗ ವರದಿ ಕೇಳಿದ್ದ ಕಾರಣ ಸಿಂಡಿಕೇಟ್‌ ಎದುರು ವರದಿಯನ್ನು ಪ್ರಸ್ತಾಪ ಮಾಡಲಾಗಿತ್ತು.

Also Read  ಮಗಳು ಫಸ್ಟ್​ಟೈಮ್​ ವೋಟ್ ಮಾಡುತ್ತಿದ್ದಾಳೆ.!➤ ಕಿಚ್ಚ ಸುದೀಪ್ ಸಂಭ್ರಮ

ವರದಿಯಲ್ಲಿ ಪ್ರೊ.ಅರಬಿ ಅವರು ತಪ್ಪಿತಸ್ಥ ಎಂದು ತಿಳಿದು ಬಂದಿದೆ, ಆದ್ದರಿಂದ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ಇದರ ಜತೆಗೆ ಪ್ರಕರಣದ ದೂರನ್ನು ಮುಚ್ಚಿಟ್ಟ ಆಗಿನ ಕುಲಸಚಿವರಾಗಿದ್ದ ಎ ಎಂ ಖಾನ್ ಅವರ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

error: Content is protected !!
Scroll to Top