ಮಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು . 31:  ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ನಗರದ ಫಳ್ನಿರ್ ಬಳಿಯ ಹೋಟೆಲ್ ಒಂದರಲ್ಲಿ ಕಳೆದ ದಿನ (ಅ.30) ಸಂಜೆ ನಡೆದ ತಿಂಡಿ ವಿಚಾರ ಸಂದರ್ಭ ಮಾತಿಗೆ ಮಾತು ಬೆಳೆದು ಶೂಟೌಟ್ ನಡೆದಿದೆ.

ಫಳ್ನಿರ್ ಮಲಬಾರ್ ಗೋಲ್ಡ್‌ ಸಮೀಪದ MFC ರೆಸ್ಟೋರೆಂಟಿಗೆ ಸುಮಾರು 5.15 ರ ಸುಮಾರಿಗೆ ತಿಂಡಿ ತಿನ್ನಲು ಬಂದಿದ್ದ ನಾಲ್ವರು ಯುವಕರು ಮಾರಾಟಕ್ಕೆ ಇಟ್ಟ ತಿಂಡಿಗೆ ಕೈ ಹಾಕಿ ತೆಗೆಯುತ್ತಿದ್ದಾಗ ಹೊಟೇಲ್ ಬೆರಳೆಣಿಕೆಯ ಸಿಬಂದಿಗಳು ಅಕ್ಷೇಪ ವ್ಯಕ್ತ ಪಡಿಸಿದಾಗ ಮಾತಿಗೆ ಮಾತು ಬೆಳೆದು ಯುವಕರ ತಂಡ ಹೊಟೇಲ್ ಸಿಬಂದಿಗಳ ಮೇಲೆ ಹಲ್ಲೆ ನಡೆಸಿ ಹೋಟೇಲಿನ ಗಾಜು- ಪಿಠೋಪಕರಣಗಳನ್ನು ಧ್ವಂಸ ಮಾಡಿ ದಾಂಧಲೆ ನಡೆಸಿದ್ದಾರೆ. ಕೂಡಲೇ ಸನಿಹದಲ್ಲಿದ್ದ ಎಂ ಎಫ್ ಸಿಯ ಇನ್ನೊಂದು ಹೊಟೇಲಿಗೆ ಮಾಹಿತಿ ನೀಡಿದ್ದಾರೆ.

Also Read  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಅನೈತಿಕ ಪೋಲಿಸ್‌ಗಿರಿ - ಎಸ್‌ಡಿಪಿಐ ಆಕ್ರೋಶ

 

ಈ ಸಂದರ್ಭ ಅರೋಪಿಗಳನ್ನು ಹಿಡಿಯಲು ಮುಂದಾದ ಎಂ ಎಫ್‌ ಸಿ ಹೊಟೇಲಿನ ಸಿಬಂದಿಗಳ ಮೇಲೆ ರಿವಾಲ್ವಾರಿನಿಂದ ಗುಂಡು ಹಾರಿಸಿದ್ದಾರೆ. ಬಳಿಕ ನಾಲ್ವರಲ್ಲಿ ಇಬ್ಬರನ್ನು ಸ್ಥಳಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ ಉಳಿದ ಇಬ್ಬರು ತಪ್ಪಿಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದ್ದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಪ್ರಕರಣ ದಾಖಲಾಗಿದೆ.

 

 

error: Content is protected !!
Scroll to Top