ಪಡುಬಿದ್ರಿ: ವಿಷ ಸೇವಿಸಿ ಆಟೋ ಚಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, . 30: ಪಡುಬಿದ್ರಿಯ ನಡ್ಸಾಲು ಗ್ರಾಮದ ನಿವಾಸಿ ಆಟೋ ಚಾಲಕನಾಗಿದ್ದ ಎಮ್ ಸತೀಶ್ ಪೂಜಾರಿ (58) ಎಂಬುವರು ಆತ್ಮಹ್ಯೆಗೆ ಶರಣಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕ ನಾಗಿದ್ದ ಇವರು  ಕೊರೊನಾ ಕಾರಣದಿಂದ ದುಡಿಮೆ ಇಲ್ಲದೆ ಸಾಲವನ್ನು ಮರುಪಾವತಿಸಲು ಆಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಅ.27ರ ಮಂಗಳವಾರದಂದು ಸುಮಾರು 11.00 ಗಂಟೆ ಸಮಯಕ್ಕೆ ಪಡುಬಿದ್ರಿ ಕಾಮತ್‌ ಪೆಟ್ರೋಲ್ ಬಂಕ್ ಬಳಿ ವಿಷ ಸೇವಿಸಿದ್ದರು. ಬಳಿಕ ವಿಷ ಸೇವಿಸಿರುವ ಬಗ್ಗೆ ಅವರ ಆಟೋ ಮಿತ್ರರಿಗೆ ತಿಳಿಸಿದ್ದಾರೆ. ಮಿತ್ರರು ಸತಿಶ್ ರವರನ್ನು ಚಿಕಿತ್ಸೆಗೆಂದು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಸತಿಶ್ ರವರು ಅ.29ರ ಗುರುವಾರ ಮೃತಪಟ್ಟಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ  ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ       ➤ ಮಾ.20ರಿಂದ 'RTE ಸೀಟಿ'ಗಾಗಿ ಅರ್ಜಿ ಸಲ್ಲಿಕೆ ಆರಂಭ…!!!

 

error: Content is protected !!
Scroll to Top