ದೇವರ ಗುಂಡಿ ಫಾಲ್ಸ್ ನಲ್ಲಿ ಬಿಕಿನಿ ಪೋಟೋ ಶೂಟ್ ಪ್ರಕರಣ ➤ ನಟಿಯರಿಂದ ಮಾಧ್ಯಮಗಳಲ್ಲಿ ಕ್ಷಮೆಯಾಚನೆ

(ನ್ಯೂಸ್ ಕಡಬ) newskadaba.com ಸುಳ್ಯ . 30: ದೇವರ ಗುಂಡಿ ಫಾಲ್ಸ್ ನಲ್ಲಿ ಬಿಕಿನಿ ಪೋಟೋ ಶೂಟ್ ಪ್ರಕರಣ – ನಟಿಯರಿಂದ ಮಾಧ್ಯಮಗಳಲ್ಲಿ ಕ್ಷಮೆಯಾಚನೆ ಸುಳ್ಯದ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್ ಗಳು ಬಿಕಿನಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು ಈಗ ವಿವಾದಕ್ಕೆ ಕಾರಣವಾಗಿತ್ತು .  ಮಾಡೆಲ್ ಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ನಟಿಮಣಿಯರು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ’ ನಾನು ತೊಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೋಶೂಟ್ ನಡೆಸಿದ್ದೆ. ಆದರೆ ಆ ಸ್ಥಳ ಧಾರ್ಮಿಕ ಸ್ಥಳ ಎಂದು ನಮಗಾರಿಗೂ ತಿಳಿದಿರಲಿಲ್ಲ. ನಾನು ಆ ಫೋಟೋಗಳನ್ನು ಇನ್ ಸ್ಟಾಗ್ರಾಂ ಗೆ ಅಪ್ಲೋಡ್ ಮಾಡಿದ್ದೆ. ಬಳಿಕ ವಿವಾದಕ್ಕೆ ಕಾರಣವಾಯ್ತೆಂದು ಡಿಲೀಟ್ ಮಾಡಿದ್ದೇವೆ. ನಾನು ಅಲ್ಲಿನ ದೇವಸ್ಥಾನದವರನ್ನು ಮತ್ತು ಸ್ಥಳೀಯರನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ” ಎಂದು ಬೆಂಗಳೂರಿನ ನಟಿ ಬೈಂದಾ ಅರಸ್ ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Also Read  ಬೆಳ್ತಂಗಡಿ: ಅಂತರ್ ರಾಜ್ಯ ದನದ ಮಾಂಸ ಸಾಗಾಟ ಪತ್ತೆ ಹಚ್ಚಿದ ಡಿಸಿಐಬಿ ಪೊಲೀಸರು ► 850 ಕೆಜಿ ಮಾಂಸ ಸಹಿತ 14.25 ಲಕ್ಷ ಮೌಲ್ಯದ ಸ್ವತ್ತುಗಳೊಂದಿಗೆ ಐವರ ಬಂಧನ

ಈ ದೇವರಗುಂಡಿ ಫಾಲ್ಸ್ ನಲ್ಲಿ ಸ್ಥಳೀಯ ನಿವಾಸಿಗಳು ಸ್ನಾನ ಮಾಡದೇ ಸ್ಥಳದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬಂದಿದ್ದರು. ಆದರೆ ಇದೀಗ ಬೆಂಗಳೂರಿನ ಬಿಕನಿ ಸುಂದರಿಯರು ಅರೆಬೆತ್ತಲಾಗಿ ಸುಳ್ಯ ದೇವರಗುಂಡಿ ಫಾಲ್ಸ್ ನಲ್ಲಿ ಪೋಟೋಶೂಟ್ ಮಾಡಿಸಿಕೊಂಡಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಮಾಡೆಲ್ ಬೃಂಧಾ ಅರಸ್ ಸೇರಿ ಇಬ್ಬರು ಮಾಡೆಲ್ ಗಳು ಈ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಈಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Also Read  ಚಾರ್ಮಾಡಿ ಘಾಟ್ ಹೆದ್ದಾರಿಗೆ ಬಂಡೆ ಕುಸಿತ ತೆರವು ಕಾರ್ಯಚರಣೆ ಯಶಸ್ವಿ

 

 

 

error: Content is protected !!
Scroll to Top