ಬಿಜೆಪಿ ಕಾರ್ಯಕರ್ತ, ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ ➤ ಮೂವರು ಆರೋಪಿಗಳ ಅರೇಸ್ಟ್

(ನ್ಯೂಸ್ ಕಡಬ) newskadaba.com ಫರಂಗಿಪೇಟೆ . 29: ಫರಂಗಿಪೇಟೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ, ಪೊಟೋಗ್ರಾಫರ್ ಮೇಲೆ ತಲವಾರು ದಾಳಿ ನಡೆಸಿದ ಮೂವರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ  ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಹಮ್ಮದ್ ಅರ್ಷದ್, ಅಬ್ದುಲ್ ರೆಹಮಾನ್, ಮುಹಮ್ಮದ್ ಸೈಫುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.

 ಬಂಟ್ವಾಳ ತಾಲ್ಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿನ ದಿನೇಶ್ ರವರ ತೃಷಾ ಪೋಟೊ ಸ್ಟುಡಿಯೋಕ್ಕೆ 4 ಜನ ಯುವಕರು ಪೋಟೊ ತೆಗೆಸುವಂತೆ ಬಂದು ಪೊಟೋಗ್ರಾಫರ್,ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅವರ  ಕೈ, ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ತೀವ್ರತರವಾಗಿ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ  ಮಾಡಿ ಪರಾರಿಯಾಗಿದ್ದರು.ಗಾಯಗೊಂಡ ದಿನೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಪುತ್ತೂರು: ಮನೆಗೆ ಜಪ್ತಿಗೆ ಬಂದ ಬ್ಯಾಂಕ್ ಸಿಬ್ಬಂದಿ ➤ ಮನೆಯೊಡತಿ ನೇಣಿಗೆ ಶರಣು

error: Content is protected !!