ತನ್ನನ್ನು “ರಾಗಿಣಿ” ಇರುವ ಸೆಲ್ ಗೆ ವರ್ಗಾಹಿಸುವಂತೆ “ಆಡಂ ಪಾಷಾ” ಕಿರಿಕ್

(ನ್ಯೂಸ್ ಕಡಬ) newskadaba.com ಬೆಂಗಳೂರು . 28: ಸ್ಯಾಂಡಲ್‍ವುಡ್ ಮಾಡೆಲ್‍ಹಾಗೂ ನಟ ಆಡಂ ಪಾಷಾ ನನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಅವರ ತಕರಾರುಗಳು ಜೈಲಿನಲ್ಲಿ ನಿಂತಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ಆಡಂ ಪಾಷಾನನ್ನು ಯಾವ ಸೆಲ್ ನಲ್ಲಿ ಇರಿಸಬೆಕೇಂಬ ಚರ್ಚೆಯ ಬಳಿಕ ಕೊನೆಗೆ ಪುರುಷನೂ ಅಲ್ಲ, ಮಹಿಳೆಯೂ ಅಲ್ಲ ಎಂಬ ತೀರ್ಮಾನದ ಮೇಲೆ ವಿಶೇಷ ಸೆಲ್ ನಲ್ಲಿ ಇರಿಸಲಾಗಿತ್ತು.

 

 

ಆದರೆ ಪಾಷಾ ಮಾತ್ರ, ಇನ್ನನ್ನು ರಾಗಿಣಿ ಇರುವ ಸೆಲ್ ನಲ್ಲಿಯೇ ಇರಿಸಬೆಕೆಂದು ಪಟ್ಟು ಹಿಡಿದಿದ್ದನೆ. ನ್ಯಾಯಾಲಯದ ವಾರೆಂಟ್ ಪ್ರಕಾರ ಪುರುಷ ಅಂತಿರೋ ಆಡಂನನ್ನು, ಮಹಿಳೆಯರಂತೆ ಬಟ್ಟೆ ಧರಿಸುವ ಆತನನ್ನು ಪುರುಷರ ಸೆಲ್ ನಲ್ಲಿ ಇಡಲು ಪೊಲೀಸರು ಸಿದ್ದವಿರಲಿಲ್ಲ. ಅದರಂತೆ ಮಹಿಳೆಯರ ಸೆಲ್ ನಲ್ಲಿ ಇಡೋಕೆ ಅಧಿಕಾರಿಗಳಿಗೆ ಇಡೋದಕ್ಕೆ ಧೈರ್ಯವಿರಲಿಲ್ಲ. ಮಂಗಳಮುಖಿಯರ ಸೆಲ್ ಇಡೋದಕ್ಕೂ ಆತ ಒಪ್ಪಿರಲ್ಲಿ. ಕೊನೆಗೆ ಕಿರಿ ಕಿರಿ ಬೇಡವೆಂದು ನ್ಯಾಯಾಲಯದ ವಾರೆಂಟ್ ನಂತೆ ಪುರುಷರ ಸೆಲ್ ನಲ್ಲಿ ಇರಿಸಲು ಮುಂದಾಗಿದ್ದಾರೆ. ಆದರೆ ತನ್ನನ್ನು ರಾಗಿಣಿ ಗಲ್ರಾಣಿ ಇರುವ ಸೆಲ್‍ಗೆ ಬದಲಾಯಿಸುವಂತೆ ಗಲಾಟೆ ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಅಧಿಕಾರಿಗಳು ಆತನನ್ನು ಜೈಲಿನಲ್ಲಿರೋ ಹಾಸ್ಪಿಟಲ್ ನ ಪ್ರತ್ಯೇಕ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.

Also Read  ಕಾರ್ಯನಿರತ ಪತ್ರಕರ್ತರನ್ನು ಕೋವಿಡ್ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ➤ H.D. ಕುಮಾರಸ್ವಾಮಿ

 

 

error: Content is protected !!
Scroll to Top