ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ಅರೇಸ್ಟ್

(ನ್ಯೂಸ್ ಕಡಬ) newskadaba.com ಮೈಸೂರು . 28: ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಅವರನ್ನು ಬಂಧಿಸಲಾಗಿದೆ. ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಅವರನ್ನು ಕೊಲೆ ಮಾಡಿಸಿದ್ದ ಆರೋಪದಲ್ಲಿ ವಿಶ್ವನಾಥ್ ಭಟ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.

 

ಪರಶಿವಮೂರ್ತಿ ಅವರ ಕೊಲೆಗೆ ವಿಶ್ವನಾಥ್ ಭಟ್ 7 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆ ವೇಲೆ ಬಯಲಾಗಿತ್ತು. ಹೀಗಾಗಿ, ಮೈಸೂರು ಪೊಲೀಸರು ವಿಶ್ವನಾಥ್ ಭಟ್ ಅವರನ್ನು ಬಂಧಿಸಿದ್ದಾರೆ.ನಿವೃತ್ತ ಪ್ರೊಫೆಸರ್ ಪರಿಶಿವ ಮೂರ್ತಿ ಅವರ ಕೊಲೆಗಾಗಿ ಇಬ್ಬರನ್ನು ಬಳಸಿಕೊಂಡಿದ್ದ ವಿಶ್ವನಾಥ್ ಭಟ್ ಪೊಲೀಸರ ಅತಿಥಿ ಆಗಿದ್ದಾರೆ ಎರಡು ವರ್ಷಗಳಿಂದ ಮಗಳು ಅನನ್ಯಾ ಭಟ್‌ ಹಾಗೂ ಹೆಂಡತಿಯನ್ನು ಬಿಟ್ಟು ವಿಶ್ವನಾಥ್ ಭಟ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ, ಎಂದು ತಿಳಿದು ಬಂದಿದೆ.

Also Read  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆಗೆ ಬೇಡಿಕೆ

 

error: Content is protected !!
Scroll to Top