ಅನ್ಯಕೋಮಿನ ಯುವತಿಯರನ್ನು ಕರೆದೊಯ್ದ ಟ್ಯಾಕ್ಸಿ ಚಾಲಕನ ಮೇಲೆ ಹಲ್ಲೆ!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 28: ಕೊಟ್ಟಿಗೆ ಹಾರದ ಟ್ಯಾಕ್ಸಿ ಚಾಲಕ ಮಹಮ್ಮದ್ ದಿಸಾನ್ ಎಂಬುವರು ಚಾರ್ಮಾಡಿ ಗ್ರಾಮದ ಹಳ್ಳ ಸೇತುವೆ ಎಂಬಲ್ಲಿ ತನ್ನ ವಾಹನದಲ್ಲಿ ಉಜಿರೆಯಿಂದ ಕೊಟ್ಟಿಗೆ ಹಾರಕ್ಕೆ ಪ್ರಯಾಣಿಕರನ್ನು ,ಯುವತಿಯರನ್ನು ಕಳೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರು ಹಾಗೂ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದು ವಾಹನಕ್ಕೆ ಅಡ್ಡಗಟ್ಟಿದ್ದಾರೆ.

ವಾಹನ ಮುಂದೆ ಹೋಗದಂತೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಕೊಲ್ಲುವ ಬೆದರಿಕೆ ಹಾಕಿದ್ದಾರೆ, ಜತೆಗೆ ರಾಡ್, ಹೆಲ್ಮೆಟ್ ನಿಂದ ಹೊಡೆದು, ತುಳಿದು ಹಲ್ಲೆ ನಡೆಸಿದ್ದಾಋಎ ಎಂದು ಹಲ್ಲೆಗೊಳಗಾದ ಮಹ್ಮಮದ್ ದಿಸಾನ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಾದ ಸುಧೀರ್, ದಿನೇಶ್, ಪವನ್ ರಾವ್, ಕಿರಣ್ ಸಾಲಿಯಾನ್, ಅಖಿಲೇಶ್ ರಾವ್, ಜಗದೀಶ್ ಲೋಕೇಶ್, ಪ್ರಮೋದ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Also Read  ವಾಹನವೊಂದು ಢಿಕ್ಕಿ ಹೊಡೆದು ಚಿರತೆ ಮೃತ್ಯು..!!

 

 

error: Content is protected !!
Scroll to Top