ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 27:  ಅಳದಂಗಡಿ ಬಳಿಯ ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಬೀಗವನ್ನು ಮುರಿದು ಒಳ ನುಗಿದ ಕಳ್ಳರು ದಾಖಲೆ ಪತ್ರಗಳನ್ನು ಸುಟ್ಟು ಹಾಕಿ ಹಣಕ್ಕಾಗಿ ಹುಡುಕಾಡಿದ ಘಟನೆ (ಅ, 26) ಕಳೆದ ದಿನ ರಾತ್ರಿ ನಡೆದಿದೆ.

 

ಶಾಲೆಯ ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜಿನ ಬೀಗವನ್ನು ಒಡೆದು, ಅದರಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ವಿವಿಧ ದಾಖಲೆ ಪತ್ರಗಳನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಜತೆಗೆ ಶಾಲೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದ ವಯರನ್ನು ಕಳ್ಳರು ಸುಟ್ಟು ಹಾಕಿದ್ದಾರೆ. ಎಂದಿನಂತೆ ಬೆಳಗ್ಗೆ ಶಾಲಾ ಮುಖ್ಯ ಶಿಕ್ಷಕರು ಶಾಲೆಗೆ ಬಂದಾಗ ಕಳ್ಳತನ ಆಗಿರುವ ಘಟನೆ ಬೆಳಕಿಗೆ ಬಂದಿದೆ,  ಪ್ರಕರಣಕ್ಕೆ ಸಂಬಂಧಪಟ್ಟಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಸುಬ್ರಹ್ಮಣ್ಯ : ಮೂವರು ಹೋಟೆಲ್ ಸಿಬ್ಬಂದಿಗಳಿಗೆ ಕೊವೀಡ್-19 ದೃಢ

 

 

error: Content is protected !!
Scroll to Top