ಶರಾಬಿನ ನಶೆ : ಬ್ಲೇಡಿನಿಂದ ಕೈ ಕೋಯ್ದುಕೊಂಡು ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಶಿರ್ವ . 27: ಕುಡಿತದ ಅಮಲಿನಲ್ಲಿ ವಿವಾಹಿತ ಮಹಿಳೆಯೊಬ್ಬರು ಬ್ಲೇಡಿನಿಂದ ಕೈ ಕೋಯ್ದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬಂಟಕಲ್ಲಿನಲ್ಲಿ ಸಂಭವಿಸಿದೆ.

 

ಬಂಟಕಲ್ಲಿನ ಅರಸಿಕಟ್ಟೆ ಪ್ರೇಮಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಭಾನುವಾರ ಬೆಳಗ್ಗೆಯೇ ಶರಾಬಿನ ಅಮಲಿನಲ್ಲಿ ಗಂಡನ ಜೊತೆ ಜಗಳವಾಡಿದ್ದರು. ಅದೇ ದಿನ ರಾಥ್ರಿ ಮತ್ತೇ ಗಂಡನ ಜೊತೆ ಜಗಳ ನಡೆದಿತ್ತು. ಊಟ ಮಾಡಿ ಮಲಗುವಂತೆ ಗಂಡ ಹೆಂಡತಿಗೆ ಹೇಳಿದ್ದಾರೆ. ತಕ್ಷಣವೇ ರೂಮಿನೊಳಗೆ ಹೋದ ಮಹಿಳೆ ಬ್ಲೇಡಿನಿಂದ ಕೈ ಕೊಯ್ದುಕೊಂಡಿದ್ದಾರೆ. ವಿಪರೀತ ರಕ್ತಸ್ರಾವವಾಗಿದ್ದ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಗಾಯಗಳಿಂದ ರಸ್ತೆಯಲ್ಲಿ ಬಿದ್ದು ವ್ಯಕ್ತಿಯ ನರಳಾಟ ➤ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬಜರಂಗದಳ

 

 

error: Content is protected !!
Scroll to Top