23 ದಿನದ ಕೂಸನ್ನು ಸುಟ್ಟು ಹಾಕಿದ ಕ್ರೂರಿ ತಾಯಿ

(ನ್ಯೂಸ್ ಕಡಬ) newskadaba.com ಕಡೂರು . 27: ಹೆತ್ತ ತಾಯಿಯೇ ತನ್ನ ಮಗುವನ್ನು ನೀರೊಲೆಯಲ್ಲಿ ಹಾಕಿ ಸುಟ್ಟ ಘಟನೆ ಕಡೂರು ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ‌. ಮಗುವನ್ನು ಸುಟ್ಟು ಕೊಂದ ಆ ಮಹಾತಾಯಿ ಅದೇ ಗ್ರಾಮದ ಸಂಗೀತಾಎಂಬಾಕೆ. ಕೇವಲ 23 ದಿನದ ಹಸುಗೂಸು ಇದಾಗಿದ್ದು ಮಗುವಿನ ದೇಹ ಸುಟ್ಟ ವಾಸನೆ ನೆರೆಹೊರೆಯವರಿಗೆ ತಿಳಿದಾಗ ಘಟನೆ ಬೆಳಕಿಗೆ ಬಂದಿದೆ‌.

 

26 ವರ್ಷ ವಯಸ್ಸಿನ ಸಂಗೀತಾ 2 ವರ್ಷಗಳ ಹಿಂದೆ ಉತ್ತರ ಪ್ರದೇಶ ಮೂಲದ ಅಮಿತ್ ಎಂಬ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದಳು. ಇದೇ ತಿಂಗಳಿಲ್ಲಿ ಆಕೆಗೆ ಹೆರಿಗೆಯಾಗಿತ್ತು‌. ಹೆಣ್ಣು ಮಗು ಹುಟ್ಟಿದ್ದು ಇಷ್ಟವಿರಲಿಲ್ಲ‌‌. ಹೀಗಾಗಿ ಈ ಪಾಪಿ ತಾಯಿ ಹಸುಗೂಸನ್ನು ಸುಟ್ಟು ಕೊಂದಿದ್ದಾಳೆ ಎಂಬುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ. ಕಡೂರು ಪೊಲೀಸರು ಈಗ ಸಂಗೀತಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Also Read  ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್..!

 

 

error: Content is protected !!
Scroll to Top