ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.!

(ನ್ಯೂಸ್ ಕಡಬ) newskadaba.com ಭಟ್ಕಳ . 27:  ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿ ರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿದೆಡೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಭಟ್ಕಳ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್ ಅವರ ಅದ್ವಾನ್ ರುಕ್ಕುದ್ದೀನ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ.

Also Read  ಖ್ಯಾತ ಬಹುಭಾಷ ನಟಿ ಪುಷ್ಪಲತಾ ನಿಧನ

 

 

ಮನೆಯಲ್ಲಿ ಯಾರೂ ಇರದ ಸಮಯ ನೋಡಿ ಕಳ್ಳತನ ನಡೆಸಿದ್ದಾರೆ.ಅದೇ ರೀತಿ ತಾಲೂಕಿನ ವಿವಿದೆಡೆ ಮನೆ ಕಳ್ಳತನ ನಡೆಸಿರುವುದು ಪೊಲೀಸರಿಗೆ ಸವಾಲಾಗಿದೆ.ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣವನ್ನ ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 

error: Content is protected !!
Scroll to Top