ವೃದ್ಧೆಯ ಸರ ಎಗರಿಸಿ ಎಸ್ಕೇಪ್.!

(ನ್ಯೂಸ್ ಕಡಬ) newskadaba.com ಬೆಂಗಳೂರು . 27 :ನಗರದಲ್ಲಿ ಮತ್ತೆ ಮುಂದುವರಿದ ಸರಗಳ್ಳರ ಹಾವಳಿ ಆರಂಭವಾಗಿದೆ. ವೃದ್ಧೆಯೊಬ್ಬರ ಸರ ಕಳವು ಮಾಡಿ ಎಸ್ಕೇಪ್ ಆಗಿರುವ ಘಟನೆ ಕೆಂಗೇರಿ ಬಳಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿನಡೆದಿದೆ.

ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ವೃದ್ಧೆ ಸರೋಜಮ್ಮ ಪೂಜಾ ಸಾಮಗ್ರಿ ತರಲು ತೆರಳುತ್ತಿದ್ದರು. ಈ ವೇಳೆ ಹಿಂಬಂದಿಯಿಂದ ಬೈಕ್ ನಲ್ಲಿ ಬಂದ ವ್ಯಕ್ತಿ ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾನೆ. ಆರೋಪಿ ಚಿನ್ನದ ಸರ ಎಳೆದ ರಭಸಕ್ಕೆ ವೃದ್ಧೆ ಕಳೆಗೆ ಬಿದ್ದಿದ್ದಾರೆ. ಪರಿಣಾಮ ವೃದ್ದೆಯ ಮೊಣಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ.ಗಾಯಾಳು ವೃದ್ಧೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಯ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೆಳ್ತಂಗಡಿ: ಕಾಂಗ್ರೆಸ್‌ನಿಂದ ರಕ್ಷಿತ್‌; ಬಿಜೆಪಿಯಲ್ಲಿ ಹರೀಶ್‌ ಪೂಂಜ ಸ್ಪರ್ಧೆ ಸಾಧ್ಯತೆ

 

 

 

 

error: Content is protected !!
Scroll to Top