ಸುಳ್ಯ: ಅಪ್ರಾಪ್ತ ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಅ. 27. ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಗುತ್ತಿಗಾರು ಗ್ರಾಮದ ಆಚಳ್ಳಿ ಕಾಲನಿ ನಿವಾಸಿ ಚರಂಬು ಅವರ ಪುತ್ರಿ ಜಯಶ್ರೀ (17)ಎಂದು ಗುರುತಿಸಲಾಗಿದೆ. ಈಕೆ ಅ. 25 ರಂದು ಮನೆಯವರೆಲ್ಲ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಸಮೀಪದ ಗೇರು ಮರಕ್ಕೆ ಬಟ್ಟೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಲಿದು ಬಂದಿದೆ. ದೂರದ ಸಂಬಂಧಿ ಯುವಕನನ್ನು ಪ್ರೀತಿಸುವುದಕ್ಕೆ ಮನೆಯವರು ಅಡ್ಡಿ ವ್ಯಕ್ತಪಡಿಸಿದ್ದರಿಂದ ಆತ್ಮಹತ್ಯೆ ಗೈದಿರುವ ಸಂಶಯ ಇದೆ ಎಂದು ಆಕೆಯ ತಾಯಿಯು ದೂರಿನಲ್ಲಿ ತಿಳಿಸಿದ್ದಾರೆ.

Also Read  ಇಸ್ಲಾಮಾಬಾದ್‌ನಲ್ಲಿ ಕಾರ್ ಬಾಂಬ್ ಸ್ಫೋಟ   ➤ ಇಬ್ಬರು ಶಂಕಿತ ಉಗ್ರರು, ಓರ್ವ ಪೊಲೀಸ್  ಮೃತ್ಯು           

error: Content is protected !!
Scroll to Top