ಉಡುಪಿ : ಬ್ಯಾರಿಕೆಡ್ ಗಳನ್ನು ಹಳ್ಳಕ್ಕೆ ಎಸೆದ ಕಿಡಿಗೇಡಿಗಳು !



(ನ್ಯೂಸ್ ಕಡಬ) newskadaba.com ಹಿರಿಯಡ್ಕ . 26: ರಸ್ತೆಯಲ್ಲಿ ವಾಹನ ಸಂಚಾರಿಗಳ ಸುರಕ್ಷತೆ ಮತ್ತು ವೇಗ ತಡೆಗಾಗಿ ಹಾಕಿದ್ದ ಬ್ಯಾರಿಕೆಡ್ ಗಳನ್ನು ಹಳ್ಳಕ್ಕೆ ಎಸೆದು ವಿಕೃತಿ ಮೆರೆದಿರುವ ಘಟನೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಸಮೀಪ ನಡೆದಿದೆ.





ಸ್ಪಂದನ ಫ್ರೆಂಡ್ಸ್ ಕುಕ್ಕೆಹಳ್ಳಿ ಯವರು ವಾಹನ ಸಂಚಾರಿಗಳ ಸುರಕ್ಷತೆ ಮತ್ತು ವೇಗ ತಡೆಗಾಗಿ ನೀಡಿದ ಬ್ಯಾರಿಕೇಡ್ ಗಳನ್ನು ರಸ್ತೆಯ ಪಕ್ಕದ ಹಳ್ಳಕ್ಕೆಬಿಸಾಕಿ ಅದರ ಮೇಲೆ ಹಲವು ಕಲ್ಲುಗಳ ರಾಶಿ ಹಾಕಿದ್ದು ಕಂಡುಬಂದಿದೆ. ಕಿಡಿಗೇಡಿಗಳು ಭಾನುವಾರ ರಾತ್ರಿ ಈ ಕೃತ್ಯವೆಸಗಿದ್ದು ಸೋಮವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top