6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com ನವದೆಹಲಿ . 26: ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ ಮನ್ನಾ ಘೋಷಿಸಿದ್ದು,2 ಕೋಟಿವರೆಗಿನ ಸಾಲಕ್ಕೆ ಈ ಮನ್ನಾ ಅನ್ವಯವಾಗಲಿದೆ.

ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 6,500ಕೋಟಿ ರೂಪಾಯಿ ಹೊರೆಯಾಗಲಿದೆ. ಕೊರೋನಾ ಲಾಖ್ ಡೌನ್ ಅವಧಿಯ ಮಾರ್ಚ್ 1 ರಿಂದ ಅಗಸ್ಟ್ 31ರ ವರೆಗಿನ ಸಾಲದ ಕಂತು ಮರುಪಾವತಿ ಮುಂದೂಡಿಗೆ ಅವಧಿಗೆ ಅನ್ವಯಿಸುವಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಯ ಪ್ರಯೋಜನ ಪಡೆದವರಿಗೆ ಮತ್ತು ಪಡೆಯದವರಿಗೂ ಈ ಘೋಷಣೆ ಅನ್ವಯವಾಗಲಿದೆ. ಎಂ. ಎಸ್ ಎಂ.ಇ ಲೋನ್, ಶಿಕ್ಷಣ ಸಾಲ, ಗೃಹ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ,ವಾಹನ ಸಾಲ, ವೈಯಕ್ತಿಕ ಸಾಲ, ಉಪಭೋಗದ ಸಾಲ ಪಡೆದವರಿಗೆ ಈ ಚಕ್ರಬಡ್ಡಿ ಮನ್ನಾ ಯೋಜನೆ ಅನ್ವಯವಾಗಲಿದೆ.

Also Read  ಪ್ಯಾರಾಲಿಂಪಿಕ್ಸ್- 10 ಮೀಟರ್ ಏರ್ ರೈಫಲ್ ನಲ್ಲಿ ಚಿನ್ನ ಗೆದ್ದ ಅವನಿ..!

 

 

error: Content is protected !!
Scroll to Top