ಮೈಸೂರು ಅರಮನೆಯಲ್ಲಿ ವಿಜಯದಶಮಿ ಆಚರಣೆ ಆರಂಭ

(ನ್ಯೂಸ್ ಕಡಬ) newskadaba.com ಮೈಸೂರು . 26: ದಸರಾ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯಲ್ಲಿ ಸರಳ ವಿಜಯದಶಮಿ ಆಚರಣೆಗಳು ಆರಂಭಗೊಂಡಿದ್ದು, ಇಂದು ರಾಜವಂಶಸ್ಥರಿಂದ ಉತ್ತರ ಪೂಜೆ ನೆರವೇರಲಿದೆ. ಬೆಳಗ್ಗೆ 9.30ಕ್ಕೆ ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳು ಆನೆ ಬಾಗಿಲಿಗೆ ಆಗಮಿಸಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ವಿಜಯಯಾತ್ರೆ ಹೊರಡಲಿದ್ದಾರೆ.

ಬೆಳಗ್ಗೆ 9.45ಕ್ಕೆ ಖಾಸ ಆಯುಧಗಳಿಗೆ ಉತ್ತರ ಪೂಜೆ ನಡೆಯಲಿದ್ದು, ನಂತರ ಅವುಗಳನ್ನು ಬೆಳ್ಳಿ ರಥದಲ್ಲಿ ಭುವನೇಶ್ವರಿ ದೇವಾಲಯಕ್ಕೆ ರವಾನಿಸಲಾಗುವುದು. ಭುವನೇಶ್ವರಿ ದೇವಾಲಯದಲ್ಲಿ ಯದುವೀರ ಅವರು ಬನ್ನಿಪೂಜೆ ನೆರವೇರಿಸಲಿದ್ದಾರೆ. ವಿಜಯಯಾತ್ರೆ ಮುಗಿದ ತಕ್ಷಣ ಚಾಮುಂಡೇಶ್ವರಿ ಮೂರ್ತಿ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಆಗಲಿದೆ.

 

Also Read  ರೈಲಿಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ ➤ 14 ದಿನಗಳ ನ್ಯಾಯಾಂಗ ಬಂಧನ

ಇತಿಹಾಸದಲ್ಲೇ ಮೊದಲ ಭಾರಿಗೆ ಕೋರೋನಾ ಹಿನ್ನೆಲೆಯಲ್ಲಿ ದಸರಾ ಅತಿ ಸರಳವಾಗಿ ಆಚರಣೆ ಆಗುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರಿ ಜನಸ್ತೋಮವಿಲ್ಲದೆ ದಸರಾ ನಡೆಯುತ್ತಿದೆ. ಕರೊನಾ ಕಾರಣಕ್ಕೆ ಈ ಬಾರಿ ವಜ್ರಮುಷ್ಠಿ ಕಾಳಗ ನಡೆಯುತ್ತಿಲ್ಲ.ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ದಸರಾ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ.

 

 

error: Content is protected !!
Scroll to Top