ಲಿವ್ ಇನ್- ರಿಲೇಷನ್ ಶಿಪ್ ನಲ್ಲಿದ್ದ ಹುಡುಗಿ ಸಾವು ➤ ಹುಡುಗ ನಾಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ, ಅ. 25. ಅನುಮಾನಾಸ್ಪದ ರೀತಿಯಲ್ಲಿ ಯುವತಿ ಮೃತಪಟ್ಟ ಘಟನೆ ಉಡುಪಿ ಆಸ್ಪತ್ರೆಯೊಂದರಲ್ಲಿ ನಡೆದಿದ್ದು,ಯುವತಿಯ ಸಾವಿನ ಕುರಿತು ಆಕೆಯ ಮನೆಯವರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಯುವತಿಯು 24 ವರ್ಷದ ತುವಕನೊಂದಿಗೆ ಆರರಿಂದ ಏಳು ತಿಂಗಳುಗಳವರೆಗೆ ಲಿವ್ ಇನ್ ರಿಲೇಷನ್ ಶಿಪ್ ಸಂಬಂಧದಲ್ಲಿದ್ದರೆನ್ನಲಾಗಿದೆ. ಯುವಕನು ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಈ ಮೊದಲೇ ಮದುವೆಯಾಗಿದ್ದು ಈ ವಿಷಯವನ್ನು ಯುವತಿಯಿಂದ ಮುಚ್ಚಿಟ್ಟಿದ್ದನು. ಇದನ್ನು ತಿಳಿದುಕೊಂಡ ಈಕೆ ಖಿನ್ನತೆಗೆ ಒಳಗಾಗಿದ್ದಳು. ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ಯುವಕ ನಿಗೂಢವಾಗಿ ಕಣ್ಮರೆಯಾಗಿದ್ದು, ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಇನ್ನು ಈ ಯುವತಿ ಮತ್ತು ಯುವಕನ ಹೆಂಡತಿಯ ನಡುವೆ ಜಗಳ ಕೂಡಾ ನಡೆದಿತ್ತು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ತನಿಖೆ ನಡೆಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅಗ್ನಿಅವಘಡ ➤ ಹೊತ್ತಿ ಉರಿದ ಹಾಸಿಗೆ ಮಳಿಗೆ

error: Content is protected !!
Scroll to Top