ಬಜರಂಗದಳದಿಂದ ಭರ್ಜರಿ ಕಾರ್ಯಾಚರಣೆ ➤ 12 ಗೋವುಗಳ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು . 25: ಕರಾವಳಿಯಲ್ಲಿ ಮಾತ್ರ ದಿನದಿಂದ ದಿನಕ್ಕೆ ಅಕ್ರಮ ಗೋಸಾಗಾಟ ಪ್ರಕರಣಗಳು ಪತ್ತೆಯಾಗುತ್ತಲೇಯಿದೆ. ಪೊಲೀಸರು ಕ್ರಮ ಕೈಗೊಂಡರು ಕ್ಯಾರೆ ಅನ್ನದೇ ಖದೀಮರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಲೇಯಿದ್ದರೆ.

ಇಂತಹ ಹೀನಾಯ ಕೃತ್ಯಗಳಿಗೆ ಯಾವಾಗ ಮುಕ್ತಿ ದೊರೆಯುತ್ತದೋ ತಿಳಿದಿಲ್ಲ. ಅದರಂತೆ ಕಳೆದ ದಿನ ರಾತ್ರಿವೇಳೆಯಲ್ಲಿ ಸಣ್ಣ ಟೆಂಪೋವೊಂದರಲ್ಲಿ ಹಿಂಸಾತ್ಮಕವಾಗಿ ಒಂದರ ಮೇಲೊಂದರಂತೆ ಒಟ್ಟು 12 ದನಗಳನ್ನು ಸಾಗಾಟ ಮಾಡುತ್ತಿದ್ದ ಖದೀಮರನ್ನು ಬಜರಂಗದಳದವರು ತಡೆದಿದ್ದಾರೆ. ಬಂಟ್ವಾಳದಿಂದ ಟೆಂಪೋವನ್ನು ಅಟ್ಟಿಸಿಕೊಂಡು ಬಂದ ಭಜರಂಗದಳದವರು ಉಳ್ಳಾಲದ ಕಸಾಯಿಖಾನೆಗೆ ಹೋಗುವ ವಾಹನವನ್ನು ಪಂಪ್ವೆಲ್ ಬಳಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಹಾಗೂ 12  ಗೋವುಗಳನ್ನು ರಕ್ಷಿಸಿದ್ದಾರೆ.

Also Read  ಕಡಬ: ಗರ್ಭವತಿಯಾದ ಅಪ್ರಾಪ್ತೆ ➤ ಯುವಕ ಅರೆಸ್ಟ್

 

 

error: Content is protected !!
Scroll to Top