ರಾಗಿಣಿ, ಸಂಜನಾ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್



(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 25: ಡ್ರಗ್ಸ್ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಕಾಯ್ದಿರಿಸಿದೆ.





 

ಒಂದೂವರೆ ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ನಟಿಯರು ಇಂದಿನವರೆಗೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿರುವ ಸಿಸಿಬಿ ಇಬ್ಬರಿಗೂ ಜಾಮೀನು ನೀಡದಂತೆ ಮನವಿ ಮಾಡಿದೆ. ಜಾಮೀನು ವಿಚಾರಣೆ ಮುಂದುಡಿಕೆ ಆಗಿರುವ ಕಾರಣ ಇಬ್ಬರೂ ನಟಿಯರು ದಸರಾ ಹಬ್ಬವನ್ನು ಜೈಲಿನಲ್ಲೇ ಆಚರಿಸಿಕೊಳ್ಲಬೇಕಾದ ಸ್ಥಿತಿ ಒದಗಿದೆ.






error: Content is protected !!
Scroll to Top